Sunday, July 13, 2025
spot_img
Homeಜಿಲ್ಲಾ ಸುದ್ದಿಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ.

ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ, ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಭಾರತೀಯ ರೈಲ್ವೆ ಸಚಿವಾಲಯವು ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ನಿಮಯದಲ್ಲಿ ಹೊಸ ಬದಲಾವಣೆ ಮಾಡಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಿ ರೈಲ್ವೆ ಸಚಿವಾಲಯ ಆದೇಶಿಸಿದೆ. ಇನ್ನು ತತ್ಕಾಲ್ ಟಿಕೆಟ್ ಬುಕಿಂಗ್ ನಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಗಿದೆ? ಹೇಗೆ ಬುಕ್ ಮಾಡಬೇಕೆನ್ನುವ ವಿವರ ಇಲ್ಲಿದೆ.

ಭಾರತೀಯ ರೈಲ್ವೆ ಸಚಿವಾಲಯವು (Indian Railways) ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಯದಲ್ಲಿ (Tatkal Train Ticket Booking) ಹೊಸ ಬದಲಾವಣೆ ಮಾಡಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬೇಕೆಂದರೆ IRCTC ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ ಗೆ ಆಧಾರ್ ಲಿಂಕ್ ಆಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಇನ್ಮುಂದೆ ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ತತ್ಕಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಏಜೆಂಟ್ ಗಳ ಮೇಲೆ ಸಮಯದ ನಿರ್ಬಂಧ ಹೇರಿದೆ. ಈ ಬಗ್ಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಈ ಹೊಸ ನಿಯಮ ಜುಲೈ 1ರಿಂದ ಈ ಜಾರಿಗೆ ಬರಲಿದೆ ಎಂದು ರೈಲ್ವೆ ಸಚಿವಾಲ ತಿಳಿಸಿದೆ.

01-07-2025 ರಿಂದ ಜಾರಿಗೆ ಬರುವಂತೆ ತತ್ಕಾಲ್ ಟಿಕೆಟ್‌ಗಳನ್ನು ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ಐಆರ್ ಟಿಸಿ ವೆಬ್‌ಸೈಟ್ ಅಥವಾ ಅದರ ಆ್ಯಪ್ ಮೂಲಕ ಬುಕ್ ಮಾಡಬಹುದು. ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕಡ್ಡಾಯಗೊಳಿಸಲಾಗುತ್ತದೆ ಎಂದು ತಿಳಿಸಿದೆ.

ಕಂಪ್ಯೂಟರ್ ಆಧಾರಿತ OTP ಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆ ಅಥವಾ ಅಧಿಕೃತ ಏಜೆಂಟ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ. ಇದನ್ನು ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

*ಏಜೆಂಟ್ಗಳಿಗೆ ತತ್ಕಾಲ್ ಬುಕಿಂಗ್ ನಿರ್ಬಂಧ*
ಇನ್ನು ತತ್ಕಾಲ್ ಟಿಕೆಟ್ ಸಾಮಾನ್ಯ ಜನರಿಗೆ ಸಿಗಲಿ ಎನ್ನುವ ಉದ್ದೇಶದಿಂದ ರೈಲ್ವೆ ಸಚಿವಾಲಯವು ಮಹತ್ತರ ಬದಲಾವಣೆಯೊಂದನ್ನು ತಂದಿದೆ. ಅದೇನೆಂದರೆ, ಭಾರತೀಯ ರೈಲ್ವೆಯ ಅಧಿಕೃತ ಏಜೆಂಟ್ಗಳಿಗೆ ತತ್ಕಾಲ್ ಟಿಕೆಟ್ ಆರಂಭವಾಗುವ ಮೊದಲ 30 ನಿಮಿಷದಲ್ಲಿ ಬುಕಿಂಗ್ ಮಾಡುವ ಅವಕಾಶವನ್ನು ನಿರ್ಬಂಧಿಸಿದೆ. ಅಂದರೆ ಬೆಳಗ್ಗೆ 10 ರಿಂದ 10.30 ರವರೆಗೆ ಎಸಿ, ಬೆಳಗ್ಗೆ 11 ರಿಂದ 11.30 ರವರೆಗೆ ಆರಂಭವಾಗುವ ನಾನ್ ಎಸಿ ಟಿಕೆಟ್ ಗಳನ್ನು ಬುಕ್ ಮಾಡುವುದಕ್ಕೆ ಏಜೆಂಟ್ಗಳಿಗೆ ಅವಕಾಶ ನೀಡಿಲ್ಲ.

ಈ ಅವಧಿಯಲ್ಲಿ ಆಧಾರ್ ದೃಢೀಕರಿಸಿದವರಿಗೆ ಆದ್ಯತೆ ನೀಡಲಾಗಿದೆ. ಅದೇ ರೀತಿ ಜುಲೈ 15ರಿಂದ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್ ಒಟಿಪಿ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಒಟಿಪಿ ದೃಢೀಕರಣದ ನಂತರವೇ ಪಿಆರ್ ಎಸ್ ಕೌಂಟರ್ ಗಳ ಮೂಲಕ ಬುಕ್ಕಿಂಗ್ ಮಾಡಲು ತತ್ಕಾಲ್ ಟಿಕೆಟ್ ಲಭ್ಯವಿರುತ್ತವೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತತ್ಕಾಲ್ ಯೋಜನೆಯ ಪ್ರಯೋಜನೆಗಳನ್ನು ಸಾಮಾನ್ಯ ಬಳಕೆದಾರರೂ ಪಡೆಯಲು ಈ ಕ್ರಮ ಜರುಗಿಸಲಾಗಿದೆ. ಜುಲೈ 1ರಿಂದ ಭಾರತೀಯ ರೈಲ್ವೆಯ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವವರು ಆಧಾರ್ ದೃಢೀಕರಣ ಮಾಡಿಕೊಳ್ಳಬೇಕು ಎಂದು ಸಚಿವಾಲು ಹೇಳಿದೆ.

ವ್ಯವಸ್ಥೆಯಲ್ಲಿ ಆದ ಮಾರ್ಪಾಡು ಮತ್ತು ಬದಲಾವಣೆಗಳನ್ನು ಎಲ್ಲಾ ವಲಯ ರೈಲ್ವೆಗಳಿಗೆ ತಿಳಿಸಲು ಸಚಿವಾಲಯವು ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಮತ್ತು IRCTC ಗೆ ನಿರ್ದೇಶಿಸಿದೆ. ಜೊತೆಗೆ, ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದೆ.

ವ್ಯವಸ್ಥೆಯಲ್ಲಿ ಆದ ಮಾರ್ಪಾಡು ಮತ್ತು ಬದಲಾವಣೆಗಳನ್ನು ಎಲ್ಲಾ ವಲಯ ರೈಲ್ವೆಗಳಿಗೆ ತಿಳಿಸಲು ಸಚಿವಾಲಯವು ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಮತ್ತು IRCTC ಗೆ ನಿರ್ದೇಶಿಸಿದೆ. ಜೊತೆಗೆ, ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದೆ.
ಇನ್ನು ತತ್ಕಾಲ್ ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಬಳಕೆದಾರರು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯವು ರೈಲ್ವೆಯ ಎಲ್ಲ ವಲಯಗಳಿಗೆ ಮಾಹಿತಿ ನೀಡಿದೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...

ಛತ್ರಪತಿ ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಸ್ಪೂರ್ತಿದಾಯಕ. ವಿದ್ಯಾರ್ಥಿಗಳು ನಾಯಕತ್ವ ಗುಣ ರೂಢಿಸಿಕೊಳ್ಳಿ : ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಹಿತನುಡಿ.

ಛತ್ರಪತಿ ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಸ್ಪೂರ್ತಿದಾಯಕ. ವಿದ್ಯಾರ್ಥಿಗಳು ನಾಯಕತ್ವ ಗುಣ ರೂಢಿಸಿಕೊಳ್ಳಿ : ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಹಿತನುಡ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ. ಸ್ವರಾಜ್ಯ ಸ್ಥಾಪನೆಗೆ, ಸ್ವಾಭಿಮಾನಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!