ಛತ್ರಪತಿ ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಸ್ಪೂರ್ತಿದಾಯಕ.
ವಿದ್ಯಾರ್ಥಿಗಳು ನಾಯಕತ್ವ ಗುಣ ರೂಢಿಸಿಕೊಳ್ಳಿ : ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಹಿತನುಡ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಸ್ವರಾಜ್ಯ ಸ್ಥಾಪನೆಗೆ, ಸ್ವಾಭಿಮಾನಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ರಾಷ್ಟ್ರ ಭಕ್ತಿ ಆಡಳಿತಗಾರನಾಗಿ ತುಂಬಾ ಪ್ರೇರಣಾದಾಯಿ ಎಂದು ಕೂಡ್ಲಿಗಿ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್‌ಇ ಶಾಲೆಯಲ್ಲಿ ಏರ್ಪಡಿಸಿದ್ದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಭಾರತದ ಚರಿತ್ರೆಯಲ್ಲಿ ಶಿವಾಜಿ ಮಹಾರಾಜರ ಹೆಸರು ಅಗ್ರಪಂಕ್ತಿಯಲ್ಲಿದೆ. ಹಿಂದೂಸ್ತಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿ ಅನೇಕ ಕೋಟೆಗಳನ್ನು ಗೆದ್ದು ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯವರು ಸಾಮ್ರಾಜ್ಯ ಸ್ಥಾಪನೆಗಾಗಿ ಹೋರಾಟದ ಮೂಲಕ ಶ್ರಮಿಸಿದ್ದು ನಮಗೆಲ್ಲ ಸ್ಪೂರ್ತಿದಾಯಕವಾಗಿದೆ. ಶಿವಾಜಿಯ ಶೌರ್ಯಯುತ ಜೀವನ ನಾವೆಲ್ಲ ಮಾದರಿಯಾಗಿ ತೆಗೆದುಕೊಂಡು ನಮ್ಮ ಜೀವನದಲ್ಲಿ ಜವಾಬ್ದಾರಿಯನ್ನು ಅಳವಡಿಸಿಕೊಳ್ಳಬೇಕಿದೆ. ನಾಯಕತ್ವಕ್ಕೆ ಶಿವಾಜಿಯಲ್ಲಿರುವ ಗುಣಗಳು ಎಲ್ಲರಿಗೂ ಸ್ಪೂರ್ತಿ ನೀಡುತ್ತವೆ. ಶಿವಾಜಿಯ ನಾಯಕತ್ವವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕಿದೆ ಎಂದರು.
ಮುಖ್ಯ ವಕ್ತಾರರಾದ ದುರ್ಗಣ್ಣಜೀ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನುಶಾಸನ, ಕಲಿಕೆ, ಸಂಘಟಿತ ಶಕ್ತಿ ಇವೆಲ್ಲವೂ ನಿರಂತರವಾಗಿರಬೇಕು. ನಾವೆಲ್ಲರೂ ಒಂದೇ ಕುಟುಂಬ ಎಂದು ತಿಳಿದು ಕಾರ್ಯಪ್ರವೃತ್ತರಾಗಬೇಕು. ಶಿವಾಜಿ ಮಹಾರಾಜರ ಬಾಲ್ಯದ ಜೀವನ ಸಾಧನೆಗಳನ್ನು ವಿವರಿಸಿದರು. ಶಿವಾಜಿಯು ಶೂನ್ಯದಿಂದ ಸಾಮ್ರಾಜ್ಯ ಸ್ಥಾಪಿಸಿದವರು. ಹಿಂದೂ ಜನಮಾನಸದಲ್ಲಿ ಆತ್ಮಸ್ಥೆöÊರ್ಯ ತುಂಬಲು ಹಾಗೂ ಶಕ್ತಿ, ಸಾಮರ್ಥ್ಯ ವಿವೇಚನೆಗೆ ಅನುಗುಣವಾಗಿ, ಕೌಶಲ್ಯಕ್ಕನುಗುಣವಾಗಿ ಕೆಲಸವನ್ನು ಹಂಚಿ ವ್ಯವಸ್ಥಿತವಾಗಿ ಆಡಳಿತ ನಡೆಯುವಂತೆ ಮಾಡಿದ ಯೋಗ್ಯ ನೇತಾರರು ಎಂದರು.
ಇದೇ ವೇಳೆ ಅರಾವಳಿ, ಹಿಮಾಲಯ, ನೀಲಗಿರಿ ಹಾಗೂ ಸಹ್ಯಾದ್ರಿ ಎಂದು ನಾಲ್ಕು ವಾಹಿನಿಗಳಾಗಿ ವಿಭಾಗಿಸಿ ಅವುಗಳಿಗೆ ಉತ್ತಮ ನಾಯಕರನ್ನು ಆಯ್ಕೆ ಮಾಡಲಾಯಿತು. ಇವರೊಂದಿಗೆ ಶಾಲಾ ನಾಯಕರು ಹಾಗೂ ಸಾಂಸ್ಕೃತಿಕ ನಾಯಕರು, ವಾಹಿನಿಯ ನಾಯಕರನ್ನು ಆಯ್ಕೆ ಮಾಡಲಾಯಿತು. ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಸ್ವೀಕಾರ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಶಾಲೆಯ ಪ್ರಧಾನಾಚಾರ್ಯರಾದ ರಂಗನಾಥರವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಾಧ್ಯಮಿಕ ವಿಭಾಗದ ವಿದ್ಯಾರ್ಥಿಗಳು ಛದ್ಮವೇಷ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಶಂಕರಯ್ಯ, ಮಧುಕುಮಾರ್, ಪ್ರವೀಣ್, ಪಕ್ಕಿರಜ್ಜ, ಬಿ.ಟಿ.ನಾಗರಾಜ, ಅನಿಲ್ ಕುಮಾರ್, ರೇಣುಕಾ, ವಂದನಾ ಭಾಗವಹಿಸಿದ್ದರು. ಶಿಕ್ಷಕ ಕೆ.ನಾಗರಾಜ ಸ್ವಾಗತಿಸಿದರು, ಶಿಕ್ಷಕ ಆಶಾ ವಂದಿಸಿದರು. ಶಿಕ್ಷಕ ವಿನಾಯಕ ಭಟ್ ನಿರ್ವಹಿಸಿದರು.