Sunday, July 13, 2025
spot_img
Homeರಾಜ್ಯ ಸುದ್ದಿವಿಧಾನಸೌಧ ಗೈಡೆಡ್ ಟೂರ್‌ಗೆ ಇಂದಿನಿoದ ಶುಭಾರಂಭ. ಭವ್ಯ ಸೌಧದ ಮಹತ್ವ, ಇತಿಹಾಸ ವಿವರಿಸಲು ಪ್ರವಾಸಿ ಮಾರ್ಗದರ್ಶಿಗಳು...

ವಿಧಾನಸೌಧ ಗೈಡೆಡ್ ಟೂರ್‌ಗೆ ಇಂದಿನಿoದ ಶುಭಾರಂಭ. ಭವ್ಯ ಸೌಧದ ಮಹತ್ವ, ಇತಿಹಾಸ ವಿವರಿಸಲು ಪ್ರವಾಸಿ ಮಾರ್ಗದರ್ಶಿಗಳು ರೆಡಿ.

ಇನ್ಮುಂದೆ ಶಕ್ತಿ ಸೌಧ ಪ್ರೇಕ್ಷಣೀಯ ತಾಣ, ಜೂ.1 ರಿಂದ ವೀಕ್ಷಣೆಗೆ ಅಧಿಕೃತ ಅವಕಾಶ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಬೆಂಗಳೂರು.

ರಾಜ್ಯದ ಆಡಳಿತ ಶಕ್ತಿಸೌಧ ಇದೀಗ ಪ್ರವಾಸಿ ತಾಣ. ವಿಧಾನಸೌಧದ ಗೇಟ್ ಹೊರಭಾಗದಿಂದ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದವರು ಗೈಡೆಡ್ ಟೂರ್ ಮೂಲಕ ಭವ್ಯ ಐತಿಹಾಸಿಕ ಕಟ್ಟಡವನ್ನು ಕಣ್ತುಂಬಿಸಿಕೊಳ್ಳಬಹುದು. ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿ ಇಂದಿನಿoದ ಶುಭಾರಂಭಗೊಳಿಸಲಾಯಿತು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್, ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಸೌಧ ಗೈಡೆಡ್ ಟೂರ್‌ಗೆ (Vidhan Soudha) ಇಂದು ಚಾಲನೆ ನೀಡಿದರು. ಜೂ.1 ರಿಂದ ಅಧಿಕೃತವಾಗಿ ವಿಧಾನಸೌಧ ವೀಕ್ಷಣೆಗೆ ಜನರಿಗೆ ಅವಕಾಶ ಸಿಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಕಳೆದ 75 ವರ್ಷಗಳಿಂದ ಆಡಳಿತಾತ್ಮಕ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ವಿಧಾನಸೌಧ ಇನ್ಮುಂದೆ ಪ್ರೇಕ್ಷಣೀಯ ಸ್ಥಳದ ಸಾಲಿಗೆ ಸೇರ್ಪಡೆಯಾಗಿದೆ. ಜೂನ್ 1 ರಿಂದ ಸೀಮಿತ ಪ್ರತಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರದಂದು ವಿಧಾನಸೌಧ ಗೈಡೆಡ್ ಟೂರ್‌ಗೆ ಅವಕಾಶ ಇದೆ. ಪ್ರವಾಸಿಗರಿಗೆ ತಲಾ 50 ರೂ. ಪ್ರವೇಶ ಶುಲ್ಕ ವಿಧಿಸಲಾಗಿದೆ. 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಇರಲಿದೆ. 30 ಜನರನ್ನೊಳಗೊಂಡ ಒಂದು ಬ್ಯಾಚ್‌ನಂತೆ 10 ಬ್ಯಾಚ್‌ಗಳಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶವಿದೆ. ಸದ್ಯಕ್ಕೆ 10 ಜನ ಗೈಡ್‌ಗಳು ವಿಧಾನಸೌಧದ ಭವ್ಯತೆ, ಪರಂಪರೆ, ಇತಿಹಾಸ, ಕಟ್ಟಡ ಶೈಲಿ, ಅಧಿವೇಶಗಳ ಬಗ್ಗೆ ವಿವರಣೆ ಕೊಡಲಿದ್ದಾರೆ. ಗ್ರ‍್ಯಾಂಡ್ ಸ್ಟೆಪ್ಸ್, ಕಟ್ಟಡ ಶೈಲಿ, ಸಭಾಂಗಣಗಳು, ವೀಕ್ಷಕರ ಗ್ಯಾಲರಿ, ವಿಧಾನಸೌಧ ಫೌಂಡೇಷನ್ ಸ್ಟೋನ್, ಗಣ್ಯರ ಪ್ರತಿಮೆಗಳು, ಭುವನೇಶ್ವರಿ ಪ್ರತಿಮೆ, ಸಿಎಂ ಕೊಠಡಿ, ಸಂಪುಟ ಸಭೆ ಕೊಠಡಿ ಮುಂಭಾಗಗಳು, ವಿಧಾನಸೌಧದ ವಿಶಾಲ ಕಾರಿಡಾರ್‌ಗಳ ವೀಕ್ಷಣೆ ಮತ್ತು ವಿವರಣೆ ಇರಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ವಿಜಯನಗರ ಜಿಲ್ಲಾ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ತಿಳಿಸಿದ್ದಾರೆ. ಈ ವೇಳೆ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಕಾರ್ಯದರ್ಶಿ ಹಂಪಿ ವಿ.ವಿರೂಪಾಕ್ಷಿ ಉಪಸ್ಥಿತರಿದ್ದರು.

ಹೇಗಿರಲಿದೆ ಶಕ್ತಿಸೌಧ ಗೈಡೆಡ್ ಟೂರ್?

  •  ಪ್ರತೀ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸ.
  • ಆನ್‌ಲೈನ್‌ನಲ್ಲಿ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು.
  • ಜೂನ್ 1 ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭ.
  • ವಿಧಾನಸೌಧ ಟೂರ್‌ಗೆ 16 ವರ್ಷ ಮೇಲ್ಪಟ್ಟವರಿಗೆ 50 ರೂಪಾಯಿ ದರ ನಿಗದಿ.
  • 16 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ, ಎಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.
  • https://kstdc.co/activities ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಬೇಕು.
  • ವಿಧಾನಸೌಧ ಟೂರ್ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ.
  • ಹತ್ತು ಬ್ಯಾಚ್‌ಗಳಿಗೆ ಮಾತ್ರ ಅವಕಾಶ. ಪ್ರತೀ ಬ್ಯಾಚ್‌ನಲ್ಲಿ 30 ಮಂದಿ.
  • ವಿಧಾನಸೌಧ ಪ್ರವಾಸಕ್ಕೆ ಪ್ರತಿ ಬ್ಯಾಚ್‌ಗೂ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ನಡಿಗೆ ಇರಲಿದೆ.
  • ವಿಕಾಸ ಸೌಧದ ಎಂಟ್ರಿ ಗೇಟ್ (ನಂಬರ್ 3) ಮೂಲಕ ಟೂರ್ ಆರಂಭವಾಗಲಿದೆ.
  • 20 ನಿಮಿಷ ಮುಂಚೆ ಟೂರ್ ಆರಂಭಕ್ಕೂ ಮುನ್ನ ಹಾಜರಿರಬೇಕು.
  • ಟಿಕೆಟ್ ಬುಕ್ ಮಾಡಿದವರು ಸರ್ಕಾರ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿ ತರಬೇಕು.
  • ವಿಧಾನಸೌಧ ಟೂರ್ ವೇಳೆ ನಿಗದಿತ ಸ್ಥಳದಲ್ಲಿ ಫೋಟೋ ತೆಗೆಯಲು ಅವಕಾಶ.
  • ವಿಧಾನಸೌಧ ಟೂರ್‌ಗೆ 10 ಗೈಡ್‌ಗಳ ನೇಮಕ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಲಾಗತ್ತೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!