‘ಮಂಕುತಿಮ್ಮ’ ಎಂಬ ಹೆಸರು ಏಕೆ?
ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ ವೆಂಕನಿಗೂ ಕಂಕನಿಗೊ ಶಂಕರಾರ್ಯನಿಗೊ | ಅಂಕಿತವಮಾಳ್ಕೆ ಜನರವ ರೋದಿದರೆ ಸಾಕು ಶಂಕೆ ನಿನಗೇನಿಹುದೊ – ಮಂಕುತಿಮ್ಮ ||
ಮಂಕುತಿಮ್ಮನ ಹೆಸರು ನಿಮ್ಮ ಘನತೆಗೆ ಸಾಲದು ಎಂದರೆ ಬೇಕಾದರೆ ಅದರ ಹೆಸರನ್ನು ವೆಂಕನಿಗೂ, ಕಂಕನಿಗೂ ಅಥವಾ ಶಂಕರಾಚಾರ್ಯರಿಗೊ ಇರಲಿ. ಈ ಕೃತಿಯನ್ನು ಜನರು ಓದಿದರೆ ಸಾಕು. ನಿನಗೇಕೆ ಸಂದೇಹ?
‘ಮಂಕುತಿಮ್ಮನ ಕಗ್ಗ’ ಎಂಬುದು ಈ ಕೃತಿಯ ಹೆಸರು. ಈ ಹೆಸರು ಮರ್ಯಾದೆಗೆತಕ್ಕುದಲ್ಲ ಬೇರೆ ಹೆಸರಿಡಬೇಕಾಗಿತ್ತು ಎಂದರೆ ಬೇಕಾದವರು ಬೇಕಾದ ಹೆಸರನ್ನು ಇಡಲಿ. ನನಗೇನೂ ಬೇಸರವಿಲ್ಲ. ಅದನ್ನು ವೆಂಕನಿಗೂ, ಕಂಕನಿಗೂ, ಶಂಕರಾಚಾರ್ಯರಿಗೊ ಇಡಲಿ. ನನ್ನ ಉದ್ದೇಶ ಜನರು ಈ ಕೃತಿಯನ್ನು ಓದಲಿ ಎಂದು. ನನ್ನ ಪಾಲಿಗೆ ಅಷ್ಟೇ ಸಾಕು ನಿನಗೇಕೆ ಸಂದೇಹ?