ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಗ್ರಂಥಾಲಯವೇ ದೇಗುಲವಿದ್ದಂತೆ : ಚಿಂತಕ ಗಣೇಶ್ ಹವಾಲ್ದಾರ್.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಜ್ಞಾನದ ಹಸಿವು ಇಂಗಿಸುವ ಗ್ರಂಥಾಲಯಗಳು ವಿದ್ಯಾರ್ಥಿಗಳ ಜ್ಞಾನರ್ಜನೆಗೆ ದೇಗುಲವಿದ್ದಂತೆ ಎಂದು ಶಿಕ್ಷಣ ಚಿಂತಕ ಗಣೇಶ್ ಹವಾಲ್ದಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿನ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತುಅಂತರಾಷ್ಟ್ರೀಯ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕು ಮಟ್ಟದಲ್ಲಿದ ಗ್ರಂಥಾಲಯವನ್ನು ತಂಬ್ರಹಳ್ಳಿಯ ಗ್ರಾಮೀಣ ಭಾಗದಲ್ಲಿ ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಇಲ್ಲಿನ ಮಕ್ಕಳ ನಿತ್ಯ ಗ್ರಂಥಾಲಯಕ್ಕೆ ಭೇಟಿ ನೀಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಪುಸ್ತಕಗಳನ್ನು ಹೆಚ್ಚು ಓದುವುದರಿಂದ ಮಸ್ತಕದಲ್ಲಿ ಜ್ಞಾನಾಭಿವೃದ್ಧಿಯಾಗಲಿದೆ. ದೈವ ಭಕ್ತರಿಗೆ ದೇಗುಲಗಳಿಂದ್ದತೆ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಗ್ರಂಥಾಲಯಗಳು ದೇಗುಲಗಳಾಬೇಕಿದೆ ಎಂದರು.
ಸುಬೋಧ ಕಲಿಕಾ ಕೇಂದ್ರದ ಸಮಾಲೋಚಕ ಜೆ.ಶಶಿಕಾಂತ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು. ಓದುವಿಕೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಕ್ಕಳಲ್ಲಿ ವಿಷಯದ ಗ್ರಹಿಕೆ ಹೆಚ್ಚಾಗಲಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಪುಸ್ತಕ ಹಿಡಿದು ಓದುವ ತೃಪ್ತಿ, ಮನನ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗಲಿದೆ ಎಂದರು.
ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕ ಬಿ.ಎ.ಬಸವರಾಜ ಮಾತನಾಡಿ, ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ ತರಬೇತಿ ಗ್ರಂಥಾಲಯಗಳಲ್ಲಿ ನಡೆಯುತ್ತಿವೆ ಗ್ರಾಮೀಣ ಭಾಗದ ಎಲ್ಲಾ ಮಹಿಳೆಯರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಇದಕ್ಕೂ ಮುನ್ನಾ ತಂಬ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ ಹನುಮೇಶ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ತಾಪಂ ಇಒ ಟಿ.ವೆಂಕೋಬಪ್ಪ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಗ್ರಾಪಂ ಸದಸ್ಯ ಮೆಹಬೂಬ್ ಬಾಷಾ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಗ್ರಂಥಾಲಯ ಮೇಲ್ವಿಚಾರಕ ಟಿ.ಪಾಂಡುರಂಗಪ್ಪ ಪ್ರಾಸ್ತಾವಿಕ ನುಡಿದರು.
ಇದೇ ವೇಳೆ ಸ್ಥಳೀಯರಾದ ತಂಬ್ರಹಳ್ಳಿ ಡಾ.ರಾಜೇಶ್ವರಿರವರು ಅಜ್ಜ, ಅಜ್ಜಿ ದಿ.ಬಿ.ಫಕ್ಕಿರಜ್ಜ, ದಿ.ಬಿ.ಕೊಟ್ರಮ್ಮ ಸ್ಮರಣಾರ್ಥ 5 ಸಾವಿರ ರೂಗಳು, ಟಿ.ವಿಠಲ್‌ರವರು ತಮ್ಮ ತಂದೆ ತಾಯಿ ದಿ.ಟಿ.ರಂಗಪ್ಪ ದಿ.ಟಿ.ಲಕ್ಷ್ಮವ್ವರವರ ಸ್ಮರಣಾರ್ಥ 5 ಸಾವಿರೂಗಳು, ಟಿ.ಶಿವಕುಮಾರ್‌ರವರು ಅಜ್ಜ ದಿ.ಟಿ.ಲೋಕಪ್ಪ ಇವರ ಸ್ಮರಣಾರ್ಥ 10 ಸಾವಿರೂಗಳನ್ನು ಗ್ರಂಥಾಲಯಕ್ಕೆ ದತ್ತಿನಿಧಿಗೆ ದೇಣಿಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯದ ಉತ್ತಮ ಓದುಗ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಚಂದ್ರಶೇಖರ್, ಅನುವಂಶೀಯ ಮತ್ತು ಸಸ್ಯತಳಿ ಅಭಿವೃದ್ಧಿ ಶಾಸ್ತ್ರದಲ್ಲಿ ಪಿಎಚ್ ಡಿ.ಪದವಿ ಪಡೆದ ಡಾ. ಬಿ ಸಂತೋಷ್ ಕುಮಾರಿ, ಗುರು ಶ್ರೇಷ್ಠ ಪ್ರಶಸ್ತಿ ಪಡೆದ ಶಿಕ್ಷಕ ಜಿ.ಪ್ರದೀಪ್ ಕುಮಾರ್, ತಾಲೂಕಿನ ಮಾಲವಿ ಗ್ರಾಪಂ ಗ್ರಂಥಾಲಯದ ಹಿರಿಯ ಗ್ರಂಥಪಾಲಕ ಜಿ.ಹೇಮಣ್ಣ, ಸಮಾಹಿಪ್ರಾ ಶಾಲೆ 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವೈ.ಕಿರಣ್ ಕುಮಾರ್, ನೂತನ್ ಶಾಲೆಯ 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಮಹಮ್ಮದ್ ನೂರಲ್ ಇಸ್ಲಾಂ, ಕಿ.ಪೊ.ಗು ಪ್ರೌಢಶಾಲೆಯ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಗದ್ದಿಕೇರಿ ನಿವೇದಿತಾ, ಎ.ಬಿ.ಟಿ.ಎಂ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಮೆಟ್ರಿ ಕರಿಯಮ್ಮ, ವಾಣಿಜ್ಯ ವಿಭಾಗದಲ್ಲಿ ಮೈನಳ್ಳಿ ಮೇಘನಾರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ತಂಬ್ರಹಳ್ಳಿ ಗ್ರಾಪಂ ಪಿಡಿಒ ಕೃಷ್ಣಮೂರ್ತಿ, ಸಿಆರ್‌ಸಿ ಕನಕಪ್ಪ, ಹೋಬಳಿ ಘಟಕದ ಕಸಾಪ ಅಧ್ಯಕ್ಷ ಎಸ್.ವಿ.ಪಾಟೀಲ್, ತಾಲೂಕು ಘಟಕದ ಸದಸ್ಯ ಶ್ರೀನಿವಾಸ, ಶ್ರೀ ಬಂಡೆ ರಂಗನಾಥ ಒಕ್ಕೂಟದ ಸಂಘದ ಅಧ್ಯಕ್ಷೆ ಮಂಜುಳಾ ಗಂಗಾಧರ ಗೌಡ, ನಿವೃತ್ತ ಶಿಕ್ಷಕ ಬಿ.ಶಿವಾನಂದಪ್ಪ, ಮುಖ್ಯಗುರು ಟಿ.ಮಾರುತಿ, ಶಿಕ್ಷಕರಾದ ಕಿನ್ನಾಳ್ ಕೊಟ್ರೇಶ್, ವಿಶ್ವನಾಥ್ ಪಾಟೀಲ್, ಪ್ರಮುಖರಾದ ರಂಗಪ್ಪ, ಕೆ.ನಾಗಭೂಷಣ, ಬಳಿಗಾರ ವೀರೇಶ್, ಕಡ್ಡಿ ಮಲ್ಲಿಕಾರ್ಜುನ, ಗ್ರಾಪಂ ಅರಿವು ಕೇಂದ್ರದ ಗ್ರಂಥಪಾಲಕ ರಂಗಪ್ಪ, ನಿಂಗಪ್ಪ, ಸೈಯದ್ ಮೆಹಬೂಬ್, ರವಿಕುಮಾರ್, ಕೆ.ಮಂಜುನಾಥ ಇತರರಿದ್ದರು. ಜಿ.ಪ್ರದೀಪ್ ಕುಮಾರ್, ಎಂ.ಚಂದ್ರಶೇಖರ್ ನಿರ್ವಹಿಸಿದರು.