ನ.22 ರಂದು ಬೆನ್ನು ನೋವು, ಮಂಡಿ ನೋವು, ಮಂಡಿ ಚಿಪ್ಪು ಬದಲಾವಣೆ, ಸಂಧಿವಾತ ನೋವುಗಳಿಗೆ ಉಚಿತ ತಪಾಸಣಾ ಶಿಬಿರ : ಕಿತ್ತೂರು ಚೆನ್ನಮ್ಮಾಜಿ ವಿಜಯೋತ್ಸವದ ಸ್ಮರಣೆ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರ 200ನೇ ವಿಜಯೋತ್ಸವದ ಸವಿನೆನಪಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನ.22 ರಂದು ಹರ ದೇಗುಲದ ಪಂಚಮಸಾಲಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಬಸವರಾಜ್ ಸೊನ್ನದ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ವೀರಶೈವ ಲಿಂಗಾಯತ ಪಂಚಮಸಾಲಿ 2008 ಜಗದ್ಗುರು ಪೀಠ ಹಾಗೂ ತಾಲೂಕು ಯುವ ಘಟಕದ ವತಿಯಿಂದ ಗುಳಿಗಿ ನಾಗರಾಜ ಮೆಮೋರಿಯಲ್ ಆಸ್ಪತ್ರೆ ಸಂಧಿವಾತ ಹಾಗೂ ಸ್ಪೋರ್ಟ್ಸ ಇಂಜುರಿ ತಜ್ಞರಾದ ಡಾ.ಗುಳಿಗಿ ಶಿವರಾಜ್ ಇವರ ನೇತೃತ್ವದಲ್ಲಿ ಬಡಜನರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕವಾಗಿ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಈಚೇಗೆ ಬಹುತೇಕರಲ್ಲಿ ಆರ್ಥೋ ಸಮಸ್ಯೆಗಳು ಉಲ್ಬಣಗೊಳ್ಳುತ್ತಿರುವುದು ಗಮನಿಸಿ ಯುವಘಟಕದಿಂದ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಯುವಘಟಕದ ಸದಸ್ಯರು ಹೆಚ್ಚು ಉತ್ಸುಕರಾಗಿ ತಪಾಸಣೆ ಶಿಬಿರಕ್ಕೆ ಅಗತ್ಯ ಪೂರ್ವಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನುರಿತ ತಜ್ಷ ವೈದ್ಯರೊಂದಿಗೆ ಚಿಕಿತ್ಸೆ, ಸಲಹೆ ಪಡೆದುಕೊಳ್ಳಬೇಕೆಂದು ತಿಳಿಸಿದರು. ತಾಲೂಕಿನ ಎಲ್ಲಾ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದ ನಿವಾಸಿಗಳು ಉಚಿತ ತಪಾಸಣೆಯ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಲಿ ಎಂದರು.
ಈ ವೇಳೆ ರಾಜ್ಯ ಯುವ ಘಟಕದ ಸದಸ್ಯ ಎಂ.ಗುರುಬಸವರಾಜ, ಜಿಲ್ಲಾ ಯವಘಟಕದ ಪ್ರಧಾನ ಕಾರ್ಯದರ್ಶಿ ಕೆ.ವೀರೇಶ್, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಚ್.ಬಿ.ಮಂಜುನಾಥ, ತಾಲೂಕು ಯುವಘಟಕದ ಅಧ್ಯಕ್ಷ ಎ.ಸಂತೋಷ, ಪ್ರಮುಖರಾದ ನವೀನ್ ಎಲಿಗಾರ್, ವಿಶ್ವನಾಥ, ರುದ್ರೇಶ್, ಭದ್ರವಾಡಿ ಸುರೇಶ್ ಇದ್ದರು.