ನ.8,9 ರಂದು ಪ್ರಸಿದ್ಧಿ ಶಾಲೆಯಲ್ಲಿ ‘ಮಕ್ಕಳ ಕೃಷಿ ಮೇಳ’ ಆಯೋಜನೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಪಟ್ಟಣದ ಪ್ರಸಿದ್ಧಿ ಶಾಲೆಯಲ್ಲಿ ನ.8 ಮತ್ತು 9 ರಂದು ಮಕ್ಕಳ ಕೃಷಿಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಆಡಳಿತಾಧಿಕಾರಿ ಜಿ.ಲಿಂಗು ತಿಳಿಸಿದ್ದಾರೆ.
ಕೃಷಿ ಮೇಳವನ್ನು ಶಾಸಕರಾದ ಕೆ.ನೇಮಿರಾಜನಾಯ್ಕ ಉದ್ಘಾಟಿಸಲಿದ್ದು, ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯನವರು ಕೃಷಿ ಸಾಧನ ಸಲಕರಣೆಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಾಜು ಓಸ್ತುವಾಲ್ ಕೃಷಿ ಮೇಳದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ತಹಸೀಲ್ದಾರ ಆರ್.ಕವಿತಾ, ಬಿಇಒ ಮೈಲೇಶ್ ಬೇವೂರು, ಕೃಷಿ ಇಲಾಖೆ ಎಡಿ ಸುನೀಲ್ ನಾಯ್ಕ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸಲಿದ್ದಾರೆ ಎಂದರು.