ಕನ್ನಡ ನಾಡ ಧ್ವಜ ಹಾರಿಸುವ ಮುನ್ನಾ ಪ್ರತಿಯೊಬ್ಬ ಕನ್ನಡಿಗರು ತಿಳಿಯಲೇ ಬೇಕಾದ ಮಾಹಿತಿ ಇಲ್ಲಿದೆ ಓದಿ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ (ವಿಜಯನಗರ).
ಮೈಸೂರು ರಾಜ್ಯವು ಕರ್ನಾಟಕ ಎಂದು ಘೋಷಣೆಗೊಂಡು 50 ವರ್ಷ ಹಿನ್ನೆಲೆಯಲ್ಲಿ ಇದೇ ನ.1 ರಂದು ಕರ್ನಾಟಕ ಸುವರ್ಣ ಸಂಭ್ರಮ ಮತ್ತು 69 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಅದ್ದೂರಿಯಾಗಿ ಆಚರಿಸಬೇಕಿದೆ. ರಾಜ್ಯೋತ್ಸವ ಆಚರಣೆಗೂ ಮುನ್ನ ಪ್ರತಿಯೊಬ್ಬ ಕನ್ನಡಿಗರು ಅರಿತಿರಬೇಕಾದ ಅಂಶಗಳ ಇಲ್ಲಿವೆ ನೋಡಿ.
1. ಕನ್ನಡ ಬಾವುಟ ಹಳದಿ ಮತ್ತು ಕೆಂಪು ಬಣ್ಣದ್ದಾಗಿರಬೇಕು.
2. ಹಳದಿ ಬಣ್ಣ ಮೇಲೆ ಕೆಂಪು ಬಣ್ಣ ಕೆಳಗೆ ಬರುವಂತೆ ಹಾರಬೇಕು.
3. ಬಾವುಟದ ವಸ್ತ್ರ ಕೈಮಗ್ಗ ಅಥವಾ ಖಾದಿಯಾಗಿದ್ದರೆ ಉತ್ತಮ.
4. ಬಾವುಟ ರಾಷ್ಟ್ರಧ್ವಜದ ಅಳತೆಗಳ ಅಧಾರದಲ್ಲಿ ಕನ್ನಡ ಧ್ವಜವು ಇರಬೇಕು.
5. ರಾಜ್ಯೋತ್ಸವದ ದಿನ ಬೆಳಿಗ್ಗೆ ಬಾವುಟ ಹಾರಿಸಿ ಸೂರ್ಯಾಸ್ತಕ್ಕೆ ಮುನ್ನಾ ಸಕಲ ಗೌರವಗಳೊಂದಿಗೆ ಧ್ವಜ ಇಳಿಸಬೇಕು.
6. ನಾಡಧ್ವಜದ ಮೇಲೆ ಯಾವುದೇ ಚಿತ್ರಗಳು ಇರಬಾರದು.
7. ಹರಿದ ಧ್ವಜಗಳನ್ನು ಏರಿಸುವಂತಿಲ್ಲ. ಧ್ವಜ ನೆಲಕ್ಕೆ ಬೀಳದಂತೆ ನಿಗಾ ವಹಿಸಬೇಕು.
8. ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ ನಾಡಧ್ವಜ ಹಾರಿಸುವುದು ಸರಿಯಲ್ಲ.
9. ಬಾವುಟಗಳನ್ನು ನೆಲದ ಮೇಲೆ ಇಡಬಾರದು.
10. ಕನ್ನಡ ಧ್ವಜವನ್ನು ಬಗ್ಗಿಸಿ ಗಣ್ಯರಿಗೆ ನಮಸ್ಕರಿಸುವಂತಿಲ್ಲ.
ಇವುಗಳು ನಾಡಧ್ವಜಕ್ಕೆ ನೀಡಬೇಕಾದ ಗೌರವಗಳಾಗಿವೆ ಮತ್ತು ರಾಜ್ಯೊತ್ಸವ ದಿನದಂದು ಕನ್ನಡ ಪ್ರಜ್ಞೆ ಮೆರೆಯುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿವಾಗಿದೆ. ಪ್ರತಿ ಮನೆಯಲ್ಲೂ ಕನ್ನಡ ಧ್ವಜ ಹಾರಿಸುವ ಮೂಲಕ ಕನ್ನಡಾಂಬೆ ಶ್ರೀಭುವನೇಶ್ವರಿ ತಾಯಿಯನ್ನು ಭಕ್ತಿಯಿಂದ ನಮಿಸೋಣ. ಜೈ ಕನ್ನಡಾಂಬೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ.