ರಾಜ್ಯದಲ್ಲಿ ಬೈ ಎಲೆಕ್ಷನ್ ಮುಹೂರ್ತ ಫಿಕ್ಸ್ !
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಬೆಂಗಳೂರು.
ರಾಜ್ಯದಲ್ಲಿ ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ನಿಗಧಿಪಡಿಸಿ ಅಧಿಕೃತ ಆದೇಶ ಹೊರಡಿಸಿದೆ.
ನವಂಬರ್ 13 ರಂದು ಮತದಾನ, ನವಂಬರ್ 23 ಕ್ಕೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಆಕ್ಟೋಬರ್ 18 ರಿಂದ 25 ಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 30ಕ್ಕೆ ಅವಕಾಶ ನೀಡಲಾಗಿದೆ. ಭಾರಿ ಕುತೂಹಲ ಮೂಡಿಸಿರುವ ಚುನಾವಣೆಗೆ ಮುಹೂರ್ತ ಫಿಕ್ಸ್ ಆದ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಕಣಕ್ಕಿಳಿಸುವ ಅಭ್ಯರ್ಥಿಗಳ ಲೆಕ್ಕಾಚಾರಕ್ಕೆ ಮುಂದಾಗಿವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಸಾಧಿಸಿದ ಚನ್ನಪಟ್ಟಣದ ಶಾಸಕ ಎಚ್.ಡಿ.ಕುಮಾರಸ್ವಾಮಿ, ಸಂಡೂರು ಶಾಸಕ ಈ.ತುಕಾರಾಂ, ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿಯವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರಣಕಣ ಸಿದ್ದವಾಗಿದೆ. ಆದರೆ ಮೂರು ಸಂಸದರು ತಮ್ಮ ಕ್ಷೇತ್ರಗಳಿಂದ ತಮ್ಮ ಮಕ್ಕಳನ್ನೇ ಕಣಕ್ಕಿಳಿಸುವ ಪ್ರಯತ್ನದಲ್ಲಿದ್ದಾರೆ. ತಂದೆಯಂತೆ ಮಕ್ಕಳಿಗೂ ಅಧಿಕಾರ ಸಿಗಲಿದಿಯೇ? ಜನತಾ ಜನಾರ್ಧನಾ ಅಸ್ತು ಎನ್ನುವನೇ ಎಂಬುದನ್ನು ಕಾದು ನೋಡಬೇಕಿದೆ.