ಬ್ರೇಕಿಂಗ್ ನ್ಯೂಸ್ ; ಕೊಟ್ಟೂರು ರಸ್ತೆಯಲ್ಲಿ ಬೈಕ್ ಟು ಬೈಕ್ ಮುಖಾಮುಖಿ ಡಿಕ್ಕಿ, ಸವಾರರಿಗೆ ಗಂಭೀರ ಗಾಯಗಾಯ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಕೊಟ್ಟೂರು ತಾಲೂಕಿನ ದೂಪದಹಳ್ಳಿ ಮತ್ತು ಹ್ಯಾಳ್ಯಾ ಮಾರ್ಗಮಧ್ಯದಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಅಪಘಾತಗೊಂಡು ಸವಾರರಿಗೆ ಗಂಭೀರ ಗಾಯಗೊಂಡ ಘಟನೆ ಇದೀಗ ನಡೆದಿದೆ.
ಹಗರಿಬೊಮ್ಮನಹಳ್ಳಿಯಿಂದ ಕೊಟ್ಟೂರು ಕಡೆಗೆ ತೆರಳುತ್ತಿದ್ದ ಹೊಸದುರ್ಗ ತಿಪ್ಪೇಶ್ ಎಂಬುವರಿಗೆ ಕಾಲು, ಕೈ ಮತ್ತು ಹಣೆಗೆ ಬಲವಾದ ಪೆಟ್ಟು ಗಂಭೀರ ಗಾಯಗೊಂಡಿದ್ದಾನೆ. ಕೊಟ್ಟೂರುನಿಂದ ಹಗರಿಬೊಮ್ಮನಹಳ್ಳಿ ಕಡೆಗೆ ತೆರಳುತ್ತಿದ್ದ ಕೆಸರಮಟ್ಟಿ ಗ್ರಾಮದ ಸವಾರನಿಗೆ ಕಣ್ಣು ಮತ್ತು ತಲೆಗೆ ಭಾಗದಲ್ಲಿ ಹೊಡೆತ ಬಿದ್ದ ಹಿನ್ನಲೆಯಲ್ಲಿ ಸ್ಥಳದಲ್ಲಿಯೇ ರೋಧಿಸುತ್ತಿದ್ದಾರೆ. ಸ್ಥಳೀಯರು ತುರ್ತು ಅಂಬ್ಯುಲೆನ್ಸ್ ಕರೆ ಮಾಡಿದ್ದರೂ ಬರುವುದು ವಿಳಂಬವಾದ್ದರಿಂದ ಖಾಸಗಿ ವಾಹನದಲ್ಲಿ ಗಾಯಗೊಂಡವರನ್ನು ಕೊಟ್ಟೂರು ತಾಲೂಕು ಆಸ್ಪತ್ರೆ ರವಾನಿಸಿದ್ಧಾರೆ. ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯಗೊಂಡಿದೆ. ಮುಖ್ಯರಸ್ತೆ ಮಧ್ಯೆದಲ್ಲಿ ನೀರಿನ ಪೈಪ್ ಲೈನ್ ಸಂಪರ್ಕಕ್ಕೆ ರಸ್ತೆ ಕಡಿದು ಸರಿಯಾಗಿ ಮುಚ್ಚದಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ತಗ್ಗಿನ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರರು ಅಪಘಾತಕ್ಕೀಡಾಗಿದ್ದಾರೆ ಎನ್ನಲಾಗಿದೆ.