ಹಗರಿಬೊಮ್ಮನಹಳ್ಳಿಯಲ್ಲಿ ವಿಜಯದಶಮಿ ನಿಮಿತ್ತ ಆಕರ್ಷಕ ಅರ್ ಎಸ್ ಎಸ್ ಪಥಸಂಚಲನ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಅಕರ್ಷಕ ಪಥ ಸಂಚಲನ ನಡೆಸಿತು.
ಪಥ ಸಂಚಲನದಲ್ಲಿ 60 ಕ್ಕೂ ಹೆಚ್ಚು ಸ್ವಯಂ ಸೇವಕರು ಗಣವೇಷ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು.
ಪಟ್ಟಣದ ರಾಮನಗರದ ಗಾಳಿ ಆಂಜನೇಯ ದೇಗುಲದಿಂದ ಆರಂಭಗೊಂಡು, ದುರ್ಗಾ ರಸ್ತೆ ಮಾರ್ಗವಾಗಿ ಕೂಡ್ಲಿಗಿ ರಸ್ತೆಯ ಮೂಲಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಸಮಾಪನಗೊಂಡಿತು.
ರಸ್ತೆಯುದ್ಧಕ್ಕೂ ಸ್ವಯಂಸೇವಕರಿಗೆ ಸ್ಥಳೀಯರು ಹೂಗಳನ್ನು ಹಾಕುವ ಮೂಲಕ ಸ್ವಾಗತಿಸಿದರು.
ಪಥಸಂಚಲನದಲ್ಲಿ ಪಥದರ್ಶಕ ಎ.ಶ್ರೀನಿವಾಸ, ತಾಲೂಕು ಕಾರ್ಯವಾಹ ನಟರಾಜ್ ಬೆಳ್ಳಕ್ಕಿ, ತಾಲೂಕು ಪ್ರಚಾರಕ ಕೃಷ್ಣ, ತಾಲೂಕು ವ್ಯವಸ್ಥಾ ಪ್ರಮುಖ್ ರಮೇಶ್ ಬೆಲ್ಲಂಕೊಂಡ ಸೇರಿದಂತೆ ಪ್ರಮುಖರಾದ ಡಾ.ವಿನಯ್ ಸಿಂಹ, ಬಿ.ಬಸವನಗೌಡ್ರು, ಆರ್.ಕೊಟ್ರಪ್ಪ, ಯೋಗಾನಂದ ಮೇಟಿ, ಡಾ.ಅಜ್ಜಯ್ಯ, ರಂಗನಾಥ್, ಹೆಗ್ಡಾಳ್ ಶ್ರೀನಿವಾಸ್, ರವೀಂದ್ರ ಜೋಶಿ ಗಣವೇಷಧಾರಿಗಳಾಗಿ ಉಪಸ್ಥಿತರಿದ್ದರು.
ಪಥಸಂಚಲನಕ್ಕೆ ಪೊಲೀಸ್ ಇಲಾಖೆ ಭಾರಿ ಬಿಗಿ ಬಂದೋಬಸ್ತ್ ನೀಡಲಾಗಿತ್ತು. ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಬಸವರಾಜ ಅಡವಿಬಾವಿ, ಗುರುಚಂದ್ರ, ಮೌನೇಶ್ ರಾಥೋಡ್, ಎಸ್ ಪಿ ನಾಯ್ಕ ಸೇರಿದಂತೆ ಪೊಲೀಸ್ ಪೇದೆಗಳು, ಒಂದು ಡಿಅರ್ ತುಕಡಿ ಪೇದೆಗಳು ಬಂದೋಬಸ್ತ್ ನಲ್ಲಿದ್ದರು.