ಮೈಸೂರು ದಸರಾ ಉತ್ಸವದ ಕವಿಗೋಷ್ಠಿಗೆ ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ್ ಆಯ್ಕೆ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ನಾಡಹಬ್ಬ ಮೈಸೂರು ದಸರಾ ಉತ್ಸವದ ಕವಿಗೋಷ್ಠಿಯಲ್ಲಿ ತಾಲೂಕಿನ ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ ಆಯ್ಕೆಯಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಪಂಚ ಕಾವ್ಯೋತ್ಸವ ಪರಿಕಲ್ಪನೆಯಲ್ಲಿ ಈ ಬಾರಿ ವಿಶೇಷವಾಗಿ ಸಮರಸ, ಸಮಾನತಾ, ಸಂತಸ, ಸಮಷ್ಟಿ, ಸಮೃದ್ಧ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಅ.9 ರಂದು ನಡೆಯಲಿರುವ ಸಮೃದ್ಧ ಕವಿಗೋಷ್ಟಿಯಲ್ಲಿ ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ ಆಯ್ಕೆಯಾಗಿದ್ಧಾರೆ. ಇತ್ತಿಚೀಗೆ ಹುರುಕಡ್ಲಿ ಶಿವಕುಮಾರ ರಚಿತ ಹೊಸ ಪುಸ್ತಕ ‘ಕನ್ನಡಮೆನಿಪ್ಪಾ ನಾಡು’ ಕವನ ಸಂಕಲನ ಅನಾವರಣಗೊಂಡಿತ್ತು.