ತಂಬ್ರಹಳ್ಳಿಯಲ್ಲಿ ಗಮನ ಸೆಳೆದ 108 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ತಾಲೂಕಿನ ತಂಬ್ರಹಳ್ಳಿಯಲ್ಲಿ ನವರಾತ್ರಿಯ ನಿಮಿತ್ತ ಎರಡನೆಯ ದಿನದಂದು ಲಲಿತಾ ಸಹಸ್ರನಾಮ ಮಹಿಳಾ ಸಂಘದ ಸದಸ್ಯರು ಶ್ರೀಗ್ರಾಮ ದೇವತೆಯರ ದೇವಸ್ಥಾನದಲ್ಲಿ ಬ್ರಹ್ಮಚಾರಿಣಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಗ್ರಾಮ ದೇವತೆಯರಿಗೆ ಉಡಿ ತುಂಬಿದ ಬಳಿಕ ಲಲಿತಾ ಸಹಸ್ರನಾಮ ಸ್ತೋತ್ರ ಪಠಣ ಮಾಡಲಾಯಿತು. ಗ್ರಾಮದಲ್ಲಿನ 108 ಜನ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ನವರಾತ್ರಿ ಹಬ್ಬದ ವಿಶೇಷ ಕಾರ್ಯಕ್ರಮ ಜರಗಿತು.
ಈ ವೇಳೆ ಸಂಘದ ಸದಸ್ಯೆ ಜಿ.ಗೀತಾ ಮಾತನಾಡಿ, ಮಹಿಳೆಯರು ಕುಟುಂಬದ ಬೆನ್ನೆಲುಬು, ಕುಟುಂಬದ ಏಳಿಗೆಗೆ ಶ್ರಮಿಸುವ ಹೆಣ್ಣಿನ ಒಂಬತ್ತು ಶಕ್ತಿಗಳ ಪ್ರತಿ ರೂಪವೇ ದೇವಿಯ ಅವತಾರ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯೆ ಕಮಲಾಕ್ಷಿ, ಸಂಘದ ಸದಸ್ಯರಾದ ಎಸ್. ವಾಣಿಶ್ರೀ, ಸುಮಕ್ಕ ರಾಜಶ್ರೀ, ಗಾಯತ್ರಿ, ಎಸ್ ಶಾರದಾ, ಜ್ಯೋತಿ, ಕುಣಿಕೇರಿ ಲಕ್ಷ್ಮಿ, ಮಹಾದೇವಿ, ಯಶೋಧ, ಜಿ.ಲಕ್ಷ್ಮಿ ಇತರರಿದ್ದರು.