ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಸತ್ವಯುತ ಸತ್ಯ ಸಾಹಿತ್ಯ ವಾಸ್ತವದಲ್ಲಿ ಅಗತ್ಯವಿದೆ.
ಸಂಸ್ಕಾರ ಭಾರತಿ ಪ್ರ.ಕಾರ್ಯದರ್ಶಿ, ಸಾಹಿತಿ ಡಾ.ಶಶಿಧರ ನರೇಂದ್ರ ಹೇಳಿಕೆ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ಹೊಸಪೇಟೆ.
ನವೋದಯ ಕಾಲದ ಕವಿಗಳ ಬರವಣಿಗೆಗಳು ಸಕಾಲಿಕವಾಗಿವೆ ಎಂದರೇ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಸಾಹಿತ್ಯ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ರಂಗಕರ್ಮಿ, ಸಾಹಿತಿ, ಸಂಸ್ಕಾರ ಭಾರತಿಯ ಪ್ರ.ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಹೇಳಿದರು.
ಪಟ್ಟಣದ ವಿಜಯನಗರ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಸ್ತವದಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಸತ್ವಯುತ ಸಾಹಿತ್ಯದ ಅಗತ್ಯವಿದೆ. ಸತ್ಯ ಸಾಹಿತ್ಯ ಸಾಮಾಜಕ್ಕೆ ಕೊಡುಗೆಯಾಗಬೇಕು. ಎಸ್.ಎಲ್.ಭೈರಪ್ಪನವರು ನಾನು ಬರೆದ ಕಾದಂಬರಿಗಳೂ ಇನ್ನೂ 120 ವರ್ಷಗಳ ಕಾಲ ಹೊಸತೇನಿಸುತ್ತದೆ ಎಂದು ಹೇಳಿಕೆ ನೀಡುತ್ತಾರೆಂದರೇ ಅವರ ಭವಿಷ್ಯದ ಸಾಹಿತ್ಯದಲ್ಲಿ ಎಷ್ಟು ಗಟ್ಟಿತನವಿದೆ ಎಂದು ಊಹಿಸಬೇಕಿದೆ. ಜನರ ದಾರಿದಿಕ್ಕು ತಪ್ಪಿಸುವ ಕೆಲಸ ಸಾಹಿತ್ಯಕ್ಕೆ ಅಂಟದಿರಲಿ. ದೇಶದ ಪ್ರತಿಯೊಬ್ಬರು ನಮ್ಮತನವನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿ ಉಳಿಯುವಿಗೆ ಸಂಕಲ್ಪ ಮಾಡಬೇಕಿದೆ ಎಂದರು.
ಅಭಾಸಾಪ ರಾಜ್ಯ ಕಾರ್ಯದರ್ಶಿ ನಾರಾಯಣ ಶೇವರಿ ಮುಖ್ಯ ವಕ್ತರರಾಗಿ ಮಾತನಾಡಿ, ನಮಸ್ಕಾರ ಎನ್ನುವುದನ್ನು ಆಂಗ್ಲಿಕರಿಸಲು ಸಾಧ್ಯವಿಲ್ಲ. ಸಂಸ್ಕೃತಿಯನ್ನೇ ತಿರುಚುವುದನ್ನು ಕಲಿತುಬಿಟ್ಟಿದ್ದೇವೆ. ನಾವುಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮೋಹಿತರಾಗುತ್ತಿದ್ದೇವೆ. ವಿದೇಶಿಯರು ಭಾರತೀಯ ವೇದ ಸಂಸ್ಕೃತಿ, ಯೋಗ ಸಂಸ್ಕೃತಿಗೆ ಮಾರುಹೋಗಿ ಭೋದಿಸುವಷ್ಟು ಪರಿಣಿತರಾಗುತ್ತಿದ್ದಾರೆ. ಹಾಯ್, ಹಲೋ, ಬಿಟ್ಟು ನಮಸ್ತೆ ಪದ ಬಳಸಿ ಅದೇ ನಮ್ಮತನ. ನಮಸ್ತೆ ಭಾರತೀಯ ಸಂವೇದನೆಯಾಗಿದೆ. ಭಾರತೀಯ ಸಂವೇದನೆ ಸಾಹಿತ್ಯದಲ್ಲಿ ಮೂಡಬೇಕಿದೆ. ಹಾಗಾದರೇ ಮಾತ್ರ ಓದುಗರಲ್ಲಿ ರಾಷ್ಟ್ರೀಯತೆ ಮನೋಭಾವ ಮೂಡಿಸಲು ಸಾಧ್ಯ. ರಾಷ್ಟ್ರೀಯತೆಯ ಮೂಲಭೂತ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದೇ ವೇದಗಳು. ಶಕ್ತಿಶಾಲಿಯೂ, ಓಜಸ್ವಿಯಾದ ರಾಷ್ಟ್ರದ ಕನಸನ್ನು ತಪ್ಪಸ್ವಿಗಳು ಋಷಿಮುನಿಗಳ ಕಂಡಿದ್ದರು. ಕೇವಲ ಶಕ್ತಿಶಾಲಿಯಾದರಷ್ಟೇ ಸಾಲದೂ ಸತ್ವಶಾಲಿ, ಸಂಸ್ಕೃತಿಶಾಲಿಯೂ ರಾಷ್ಟ್ರದ ಪರಿಕಲ್ಪನೆ ಮುಖ್ಯ ಎಂದರು.

ನೂತನ ಜಿಲ್ಲಾ ಸಮಿತಿ ಅಧ್ಯಕ್ಷೆ ಡಿ.ಎನ್.ಸುಜಾತಾ ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರು ಕಂಡ ಕನಸನ್ನು ಸಕಾರಗೊಳಿಸುವಲ್ಲಿ ನಮ್ಮ ಪ್ರಯತ್ನವೂ ಬೇಕು. ಸಮರ್ಥ, ಸಧೃಡ, ಸ್ವಾಸ್ಥ ಭಾರತ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ ಎಂದರು.

ಅಭಾಸಾಪದ ರಾಜ್ಯ ಸಹ ಕಾರ್ಯದರ್ಶಿ ಡಾ.ಶಿವಶರಣ ಗೋಡ್ರಾಲ ವಿಜಯನಗರ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳನ್ನು ಘೋಷಿಸಿ ಬಳಿಕ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ರಾಘವೇಂದ್ರ ದೇಶಪಾಂಡೆ ಪ್ರಾಸ್ತಾವಿಕ ನುಡಿದರು, ರವಿಕುಮಾರ ಸ್ವಾಗತಿಸಿದರು, ಅಭಿನಂದನ್ ಜೋಶಿ ವಂದಿಸಿದರು, ವೀರಭದ್ರಗೌಡ ನಿರ್ವಹಿಸಿದರು.
ವಿಜಯನಗರ ಜಿಲ್ಲಾ ಸಮಿತಿ : ಡಿ.ಎನ್.ಸುಜಾತ ರೇವಣಸಿದ್ದಪ್ಪ (ಅಧ್ಯಕ್ಷರು), ವೀರಭದ್ರಗೌಡ (ಉಪಾಧ್ಯಕ್ಷರು), ರಾಘವೇಂದ್ರ ದೇಶಪಾಂಡೆ (ಕಾರ್ಯದರ್ಶಿ), ಭಾರತಿ ಮಲ್ಲಿಕಾರ್ಜುನ (ಸಹಕಾರ್ಯದರ್ಶಿ), ರವಿಕುಮಾರ್ (ಖಜಾಂಚಿ), ಅಭಿನಂದನ್ ಜೋಶಿ (ಸಂಪರ್ಕ ಪ್ರಮುಖ), ಸುನೀಲ್ (ಮಾಧ್ಯಮ ಪ್ರಮುಖ), ಪೂಜಾ ಜೋಶಿ (ಮಕ್ಕಳ ಪ್ರಕಾರ ಪ್ರಮುಖ) ಪಿ.ಎನ್.ಕಿರಣಕುಮಾರ (ವಿದ್ಯಾರ್ಥಿ ಪ್ರಮುಖ), ಭಾರತಿ ಅಗ್ರಹಾರ (ಮಹಿಳಾ ಪ್ರಮುಖ), ಶೋಭಾ ಶಂಕರಾನಂದ (ಸಾಹಿತ್ಯ ಕೂಟ ಸಂಚಾಲಕ).
ತಾಲೂಕು ಸಮಿತಿ ಅಧ್ಯಕ್ಷರು : ಹೊಸಪೇಟೆ ಎಂ.ಎಂ.ವಿರೂಪಾಕ್ಷಯ್ಯ, ಕೂಡ್ಲಿಗಿ ಕೆ.ನಾಗರಾಜ, ಹಗರಿಬೊಮ್ಮನಹಳ್ಳಿ ಅಶೋಕ್ ಉಪ್ಪಾರ, ಹೂವಿನಹಡಗಲಿ ಅಶೋಕ ಅರ್ಕಸಾಲಿ, ಕೊಟ್ಟೂರು ಅರವಿಂದ ಬಸಾಪುರ, ಹರಪನಹಳ್ಳಿ ಕರಿಯಪ್ಪ ಚೌಟಿಗರ.