ಬೆಸ್ಟ್ ಸ್ಕೂಲ್ ವಿದ್ಯಾರ್ಥಿನಿ ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ತಾಲೂಕಿನ ಶಿವಾನಂದ ನಗರದ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆರ್.ಪ್ರಾರ್ಥನಾ ಹೊಸಪೇಟೆಯಲ್ಲಿ ನಡೆದ ಪ್ರಾಥಮಿಕ ಶಾಲೆಯ ಜಿಲ್ಲಾಮಟ್ಟದ ಚದುರಂಗ ಸ್ಫರ್ಧೆಯಲ್ಲಿ ವಿಜೇತಳಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ ಆಡಳಿತಾಧಿಕಾರಿ ಶರಣಬಸವ ಎತ್ತಿನಮನಿ ವಿದ್ಯಾರ್ಥಿನಿಯ ಸಾಧನೆಗೆ ಪ್ರತಿಕ್ರಿಯಿಸಿ, ಚದುರಂಗ ಒಂದು ಏಕಾಗ್ರತೆಯ ಆಟ, ಜೀವನದಲ್ಲಿ ಬರುವ ಹಲವು ಸಮಸ್ಯೆಗಳನ್ನು ಎದುರಿಸಿ ಬಗೆಹರಿಸುವ ಜಾಣ್ಮೆಯನ್ನು ಕಲಿಸುತ್ತದೆ ಎಂದರು. ನಮ್ಮ ಶಾಲೆಯ ಮಗು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿರುವುದು ನಮ್ಮ ಶಾಲೆ ಸೇರಿದಂತೆ ತಾಲೂಕಿಗೆ ಹೆಮ್ಮೆ ಮೂಡಿಸಿದೆ. ರಾಜ್ಯಮಟ್ಟದಲ್ಲಿ ಸಹ ವಿಜೇತಳಾಗುತ್ತಾಳೆಂಬ ವಿಶ್ವಾಸ, ಭರವಸೆ ನಮಗಿದೆ ಎಂದರು. ವಿದ್ಯಾರ್ಥಿನಿಯ ಸಾಧನೆಗೆ ಪಾಲಕರು, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿದ್ದಾರೆ.