ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಪಟ್ಟಣದ ಮಾಲವಿ ಕ್ರಾಸ್ ಬಳಿ ಕೆಎಸ್ಆರ್ ಟಿಸಿ ಬಸ್ಸೊಂದು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಹೊಸಪೇಟೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಸುಮಾರು 35 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾವ ಪ್ರಯಾಣಿಕರು ಜೀವಹಾನಿ ಸಂಭವಿಸಿಲ್ಲ. ಡ್ರೈವರ್, ಕಂಡಕ್ಟರ್ ಸೇರಿದಂತೆ ಎಲ್ಲಾ ಪ್ರಯಾಣಿಕರು ಸೇಫಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ಡಿಪೋ ವ್ಯವಸ್ಥಾಪಕ ಎನ್.ನೀಲಪ್ಪ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ಸುರಕ್ಷತೆಗೆ ನಿಗಾ ವಹಿಸಿದ್ದಾರೆ. ಕೂಡಲೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹಬೊಹಳ್ಳಿ ಘಟಕದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಪ್ರಯಾಣಕ್ಕೆ ಅನುಕೂಲ ಮಾಡಿದ್ದಾರೆ.
ಎದುರುಗಡೆ ಬರುತ್ತಿದ್ದ ಲಾರಿಯವನ ಅಜಾಗರೂಕತೆಯನ್ನು ಗಮನಿಸಿ ಬಸ್ ಚಾಲಕ ರಸ್ತೆ ಕೆಳಗಡೆ ಬಸ್ ಇಳಿಸಿದ್ದಾರೆ. ಆದರೆ ಕಳೆದ ದಿನ ಸುರಿದಿದ್ದ ಮಳೆಗೆ ತೇವಗೊಂಡಿದ್ದ ಮಣ್ಣು ಕುಸಿತದಿಂದಾಗಿ ಬಸ್ ನಿಧಾನವಾಗಿ ನೆಲಕ್ಕುರಳಿದೆ ಹಾಗಾಗಿ ಪ್ರಾಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹಬೊಹಳ್ಳಿ ಡಿಪೋ ವ್ಯವಸ್ಥಾಪಕ ಎನ್.ನೀಲಪ್ಪ ಪತ್ರಿಕೆ ಪ್ರತಿಕ್ರಿಯಿಸಿದ್ದಾರೆ.