ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ಹಗರಿಬೊಮ್ಮನಹಳ್ಳಿ.
ಶುದ್ಧ, ಚಾರಿತ್ರ್ಯದಿಂದಲೇ ನಾಲ್ಕು ಬಾರಿ ಸಂಡೂರಿನಲ್ಲಿ ಶಾಸಕರಾದ ಹಾಲಿ ಸಂಸದ ಈ.ತುಕಾರಾಂರನ್ನು ಭ್ರಷ್ಟ ಎಂದು ಕರೆದ ಮಾಜಿ ಸಚಿವ ಶ್ರೀರಾಮುಲುರವರೇ ನಿಮ್ಮ ಭ್ರಷ್ಟಚಾರವನ್ನು ಜನ ಕಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್ ಲೇವಡಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಜ್ಜನ ಸಂಸದರನ್ನು ಟೀಕಿಸುವ ಭರದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಳ್ಳದಿರಿ. ಬಿಜೆಪಿ ನಾಯಕರ ಲಂಚ, ಮಂಚದ ಹಗರಣಗಳನ್ನು ನೋಡಿಯೇ ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಸಾಮಾನ್ಯ ಜನರೊಂದಿಗೆ ಸರಳವಾಗಿ ಬೆರೆಯುವ, ವಿದ್ಯಾರ್ಹತೆ ಹೊಂದಿದ, ಅನುದಾನಗಳ ಮೂಲ ತಿಳಿದಿರುವ, ವಿನಯಶೀಲ ವ್ಯಕ್ತಿತ್ವದ ಸಂಸದ ತುಕಾರಾಂ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್‌ರವರ ಸೌಹಾರ್ದ ಆಡಳಿತದಿಂದಾಗಿ ಸಂಡೂರು ಅಗತ್ಯ ಅಭಿವೃದ್ದಿಯೊಂದಿಗೆ ಸುರಕ್ಷಿತವಾಗಿದೆ. ಬಿಜೆಪಿ ನಾಯಕರ ಸುಳ್ಳುಗಳನ್ನು ಸಂಡೂರಿನ ಜನತೆ ಕೇಳುವುದಿಲ್ಲ ಎಂದರು.