ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಕಂಪ್ಲಿ.
ಹೂಗಾರ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಹೂಗಾರ ಅಭಿವೃದ್ಧಿ ನಿಗಮಕ್ಕೆ ಹೂಗಾರ ಸಮುದಾಯದವರನ್ನು ನೇಮಿಸಬೇಕು ಎಂದು ಕರ್ನಾಟಕ ರಾಜ್ಯ ಹೂಗಾರ ಮಹಾಸಭಾದ ಅಧ್ಯಕ್ಷ ಬಸವರಾಜ ಹೂಗಾರ ಆಗ್ರಹಿಸಿದರು.
ಕಂಪ್ಲಿ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ಹೂಗಾರ ಸಮಾಜ ಸೇವಾ ಸಂಘದಿOದ ಏರ್ಪಡಿಸಿದ್ದ ಶಿವಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ,, ಹೂಗಾರ ಸಮಾಜವು ಎಲ್ಲಾ ರಂಗದಲ್ಲಿ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನಗಳನ್ನು ನೀಡಬೇಕು. ಹೂಗಾರ ಅಭಿವೃದ್ಧಿ ನಿಗಮ ರಚಿಸಿ ವರ್ಷಗಳೇ ಗತಿಸಿವೆ. ಆದರೂ, ನಿಗಮ ಕಾರ್ಯರೂಪಕ್ಕೆ ತರದೇ ಇರುವುದು ಬೇಸರ ತರಿಸಿದೆ. ಆದ್ದರಿಂದ ಕೂಡಲೇ ಸರ್ಕಾರ ನಿಗಮಕ್ಕೆ ಕಾರ್ಯರೂಪ ನೀಡುವ ಜತೆಗೆ ಅನುದಾನ ಬಿಡುಗಡೆ ಮಾಡಬೇಕು. ಹಿಂದುಳಿದ ಹೂಗಾರ ಸಮಾಜದ ಬಗ್ಗೆ ಕಾಳಜಿವಹಿಸಿ, ಹೂಗಾರ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂದರು.
ತಾಲೂಕು ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಹೂಗಾರ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ಹೂಗಾರ ಸಮುದಾಯ ಭವನಕ್ಕೆ ನಿವೇಶನ ಜತಗೆ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದು ಹೂಗಾರ, ರಾಜ್ಯ ಸಲಹೆಗಾರ ಅಂಬರೀಶ್ ಹೂಗಾರ, ತಾಲೂಕು ಸಂಘದ ಪದಾಧಿಕಾರಿಗಳಾದ ರವಿ ಹೂಗಾರ, ಜೀರು ಗಾದಿಲಿಂಗ, ಅಯ್ಯಪ್ಪ ಹೂಗಾರ, ಈಶಪ್ಪ ಹೂಗಾರ, ಶೇಖರಪ್ಪ, ಮಲ್ಲಿಕಾರ್ಜುನ, ಜೀರು ಮಲ್ಲಪ್ಪ ಉಪಸ್ಥಿತರಿದ್ದರು.
ವಿಜೃಂಭಣೆ ಮೆರವಣಿಗೆ : ಶಿವಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವ ಹಿನ್ನಲೆ ಭಾವಚಿತ್ರ ಮೆರವಣಿಗೆ ಪಟ್ಟಣದಲ್ಲಿ ವಿಜೃಂಭಣೆಯಿOದ ಜರುಗಿತು. ಇಲ್ಲಿನ ಉದ್ಭವ ಮಹಾಗಣಪತಿ ದೇವಸ್ಥಾನ ಬಳಿ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಾಂಗಾತ್ರಯ ಪಾಠಶಾಲೆಯಲ್ಲಿ ಸಮಾವೇಶಗೊಂಡಿತು. ಮಹಿಳೆಯರ ಕಳಸ ಮೆರವಣಿಗೆಗೆ ಮೆರಗು ನೀಡಿತ್ತು. ಶಿವಶರಣ ಹೂಗಾರ ಮಾದಯ್ಯ ಭಾವಚಿತ್ರ ಮೆರವಣಿಗೆಗೆ ಕಲ್ಯಾಣಚೌಕಿಮಠದ ಚನ್ನಮಲ್ಲಯ್ಯ ಶಾಸ್ತ್ರೀ ಚಾಲನೆ ನೀಡಿದರು.