ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ.
ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ರಾಗಿ ಬದಲಿಗೆ ಗೋಧಿ ಅಥವಾ ಜೋಳ ನೀಡುವಂತೆ ತಂಬ್ರಹಳ್ಳಿ ಗ್ರಾಪಂ ಸದಸ್ಯರು ವಿಜಯನಗರ ಡಿಸಿ ಎಂ.ಎಸ್.ದಿವಾಕರರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ತಂಬ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5526 ಜನಸಂಖ್ಯೆ ಇದ್ದು, ಕೃಷಿಯೇ ಇಲ್ಲಿನ ಮೂಲ ಕಸುಬಾಗಿದೆ. ಇಲ್ಲಿನ ಜನರ ಅಹಾರ ಪದ್ದತಿಯಲ್ಲಿ ಜೋಳ ಮತ್ತು ಗೋಧಿಯಿಂದ ತಯಾರಿಸಿದ ಊಟಕ್ಕೆ ಹೆಚ್ಚಿನ ಪ್ರಾದ್ಯನತೆ ನೀಡುತ್ತಾರೆ. ಪ್ರಸ್ತುತ ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಪಡಿತರ ವಿತರಣೆಯಲ್ಲಿ ತಂಬ್ರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ರಾಗಿಯನ್ನು ನೀಡಲಾಗುತ್ತಿದೆ. ರಾಗಿಯ ಬದಲಾಗಿ ಜೋಳ ಅಥವಾ ಗೋಧಿಯನ್ನು ವಿತರಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಲಾಗಿದೆ ಎಂದರು.
ಗ್ರಾಪಂ ಸದಸ್ಯರಾದ ಸಪ್ಪರದ ಕಮಲಾಕ್ಷಿ, ಎಂ.ರುದ್ರಮ್ಮ, ಬಣಕಾರ ಬಸಮ್ಮ, ಸಲೀಮಾಭಿ, ಮುಖಂಡ ಹನುಮೇಶ್ ಏಣಿಗಿ ಇತರರಿದ್ದರು.