ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಹೊಸದಾಗಿ ನಿರ್ಮಾಣದ ಹಂತದಲ್ಲಿದ್ದ ಮನೆಗೆ ಕ್ಯೂರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ 1ನೇ ವಾರ್ಡ್ ಗಾಳೆಮ್ಮ ದೇಗುಲದ ಹಿಂಭಾಗದಲ್ಲಿ ಈ ಘಟನೆ ಜರುಗಿದೆ. ಕಡಲಬಾಳು ಗ್ರಾಮದ ಅಣಜಿ ರೀತೀಶ್ (17) ಮೃತ ದುರ್ದೈವಿ.
ಕಟ್ಟಡಕ್ಕೆ ನೀರು ಬಿಡುವ ವೇಳೆ ವಿದ್ಯುತ್ ಪೂರೈಕೆಯಾಗುವ ಬೋರ್ಡ್ ನ್ನು ತೇವಾಂಶ ವಿದ್ದ ಕೈಯಿಂದ ಸ್ಪರ್ಶಿಸಿದ್ದ ವೇಳೆ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಯುವಕನ ಆಗಲಿಕೆಯಿಂದ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ. ಮೃತದೇಹ ಸರ್ಕಾರಿ ಆಸ್ಪತ್ರೆಯಲ್ಲಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.