ಹೊಸಪೇಟೆ ನಗರಸಭೆ ಅಧ್ಯಕ್ಷರಾಗಿ ಬಿಜೆಪಿ ರೂಪೇಶ್ ಕುಮಾರ್, ಉಪಾಧ್ಯಕ್ಷರಾಗಿ ರಮೇಶ್ ಗುಪ್ತ ಗೆಲವು.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದ, ಕಾಂಗ್ರೆಸ್ ಪಕ್ಷದ ಶಾಸಕ ಇದ್ದರೂ ಹೊಸಪೇಟೆ ನಗರಸಭೆ ಬಿಜೆಪಿಗೆ ಪಾಲಾಗಿರುವುದು ತುಂಬಾ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಸಂಸದ ತುಕರಾಂ, ಶಾಸಕ ಗವಿಯಪ್ಪ ಬಂದ್ರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯ ರೂಪೇಶ್ ಕುಮಾರ್, ಕಾಂಗ್ರೆಸ್ ಸದಸ್ಯ ಅಸ್ಲಾಂ ಮಾಳಿಗೆ ಪೈಪೋಟಿ ಮಾಡಿದ್ದರು. ಅಸ್ಲಾಂ17 ಮತ ಪಡೆದರೇ, ರೂಪೇಶ್ ಕುಮಾರ್ 19 ಮತ ಪಡೆದು ಜಯಗಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಮೇಶ್ ಗುಪ್ತ ಮತ್ತು ಎಚ್.ರಾಘವೇಂದ್ರ ಪೈಪೋಟಿ ನಡೆಸಿದ್ದರು. ರಾಘವೇಂದ್ರ 17 ಮತ ಪಡೆದರೇ, ರಮೇಶ್ ಗುಪ್ತ 19 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ನಗರ ಸಭೆ ಸದಸ್ಯ ಖಾರದಪುಡಿ ಮಹೇಶ್ ಗೈರಾಗಿದ್ದರು.
ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆನಂದ್ ಸಿಂಗ್ ಪರ ಘೋಷಣೆ ಕೂಗಿದರು. ಹೊಸಪೇಟೆ ನಗರಸಭೆಯಿಂದ ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.