ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ಹಗರಿಬೊಮ್ಮನಹಳ್ಳಿ.
ಪಟ್ಟಣದ ರೇಣುಕಾ ವಿದ್ಯಾಕೇಂದ್ರದಲ್ಲಿ ನಡೆದ ರಾಮನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪುರಸಭೆ ವ್ಯಾಪ್ತಿಯ ಚಿಂತ್ರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಖೋಖೋದಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗ ಮತ್ತು ಬಾಲಕಿಯರ ವಿಭಾಗದಲ್ಲಿ ಚಿಂತ್ರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ವಿಜೇತರಾಗಿದ್ದಾರೆ. ಈ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು ಮಕ್ಕಳ ಸಾಧನೆಗೆ ಚಿಂತ್ರಪಳ್ಳಿ ಗ್ರಾಮಸ್ಥರಲ್ಲಿ ಸಂತಸ ಮೂಡಿದೆ. ಮುಂಬರುವ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವಂತೆ ಪುರಸಭೆ ಸದಸ್ಯರಾದ ಬಣಕಾರ ಸುರೇಶ್ ಮತ್ತು ಅಂಬಿಕಾ ದೇವೆಂದ್ರಪ್ಪ ಹಾರೈಸಿದ್ದಾರೆ. ಶಾಲೆಯ ಮುಖ್ಯಗುರು ಸೇರಿದಂತೆ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಬಾಲಕರು ಮತ್ತು ಬಾಲಕಿಯರು ಗೆಲುವಿನ ಸಂಭ್ರಮವನ್ನು ಶಿಕ್ಷಕರೊಂದಿಗೆ ಆಚರಿಸಿದರು. ಶಿಕ್ಷಕರಾದ ಆರ್.ರಾಘವೇಂದ್ರ, ಪ್ರಭುದೇವ, ವಾಲ್ಯಾನಾಯ್ಕ, ಶಾಂತಕುಮಾರಿ, ಸೋಮನಗೌಡ, ಕೊಟ್ರೇಶ್ ನಾಯ್ಕ, ಜಿ.ಬಿ.ಪಾಟೀಲ್, ಸೋಮಕ್ಕ, ಅಶೋಕ, ವಾಮದೇವಪ್ಪ ಇದ್ದರು.