ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ಹೊಸಪೇಟೆ.
ಪತ್ನಿಯ ಶೀಲ ಶಂಕಿಸಿ ಪತಿರಾಯ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ನಿವಾಸಿ ಶೃತಿ ಮೇಟಿ (28) ಎಂಬುವರನ್ನು ಪತಿ ಮೇಟಿ ರಾಮಲಿಂಗಪ್ಪ (30) ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ದಂಪತಿಗಳ ಮಧ್ಯೆ ಜಗಳ ನಡೆಯುತ್ತಿತ್ತು ಅನೇಕ ಬಾರಿ ರಾಜಿಪಂಚಾಯಿತಿ ಮಾಡಿ ಇಬ್ಬರನ್ನು ಜೊತೆಗೆ ಜೀವನ ಮಾಡಲು ತಿಳಿಹೇಳಲಾಗಿತ್ತು. ಆದರೆ ತನ್ನ ಮಗಳ ಕೊಲೆಗೆ ಅಳಿಯನಿಗೆ ಅವರ ಕುಟುಂಬದವರು ಕುಮ್ಮಕ್ಕು ನೀಡಿರುವ ಕುರುಬರ ಶರಣಮ್ಮ, ದೇವಿರಪ್ಪ, ನಾಗಮ್ಮ ಎಂಬುವರ ವಿರುದ್ಧ ಕ್ರಮಕೈಗೊಳ್ಳುವಂತೆ ಮೃತಳ ತಂದೆ ಮೈಲಾರಪ್ಪ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಳಿಗೆ ಇಬ್ಬರು ಮಕ್ಕಳು ಇದ್ದಾರೆ. ಕೊಲೆ ಮಾಡಿರುವ ಪತಿ ಮೇಟಿ ರಾಮಲಿಂಗಪ್ಪ ಮತ್ತು ಆತನ ಸಹೋದರಿ ಶರಣಮ್ಮರನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ಸಾವು ಮತ್ತು ತಂದೆ ಜೈಲುಪಾಲಾದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳು ಅನಾಥರಾಗಿದ್ಧಾರೆ.