ಹಿಂದೂ ಮಹಾಗಣಪತಿ ಸಮಿತಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ಹಗರಿಬೊಮ್ಮನಹಳ್ಳಿ.
ಸನಾತನ ಧರ್ಮದಲ್ಲಿ ದಾನ ಧರ್ಮಕ್ಕೆ ವಿಶೇಷ ಮಹತ್ವವಿದೆ. ಇಂದಿನ ಯುವಕರು ಧರ್ಮ ರಕ್ಷಣೆಗೆ ನೀಡುವಷ್ಟೇ ದಾನ ಸಂಸ್ಕೃತಿಗೆ ಆದ್ಯತೆ ನೀಡಬೇಕಿದೆ ಎಂದು ಸಾಹಿತ್ಯೋಪಾಸಕಿ ಅಕ್ಕಿ ಶಾರದ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ನೀಡಿ ಬಳಿಕ ಮಾತನಾಡಿದರು. ದಾನವೆಂದರೇ ಕೇವಲ ಹಣ ನೀಡುವುದಷ್ಟೇ ಅಲ್ಲ. ನಮ್ಮಿಂದಾಗುವ ಚಿಕ್ಕ ಚಿಕ್ಕ ಸಹಾಯಗಳು ಇನ್ನೊಬ್ಬರ ಅಗತ್ಯತೆಗಳನ್ನು ಪೂರ್ಣಗೊಳಿಸುತ್ತವೆ. ರಕ್ತದಾನ ಶ್ರೇಷ್ಟ ದಾನವಾಗಿದೆ. ನಾವು ನೀಡುವ ರಕ್ತದಿಂದ ಅನೇಕರಿಗೆ ಅನುಕೂಲವಾಗಲಿದೆ. ಗರ್ಭೀಣಿಯರಿಗೆ, ವಯೋವೃದ್ಧರಿಗೆ, ರಕ್ತಹೀನತೆಯಿಂದ ಬಳಲುತ್ತಿರುವವರಗೆ ರಕ್ತದ ಅಗತ್ಯ ತುಂಬಾ ಇರುತ್ತದೆ. ಯಾವುದೇ ಕಾರ್ಖಾನೆಯಲ್ಲಿ ತಯಾರು ಮಾಡಲು ಸಾಧ್ಯವಿರದ ವಸ್ತು ರಕ್ತವಾಗಿದೆ. ಮನುಷ್ಯನಿಂದ ಮನುಷ್ಯನಿಗೆ ಸದ್ಭಳಕೆಯಾಗಬಲ್ಲ ರಕ್ತವನ್ನು ನಾವು ಆರೋಗ್ಯವಿದ್ದಾಗಲೇ ರಕ್ತದಾನ ಮಾಡುವುದು ಶ್ರೇಷ್ಟ ಕೆಲಸವಾಗಿದೆ. ಹಾಗಾಗೀ ಯುವಜನತೆ ಮತ್ತು ಮಹಿಳೆಯರು ರಕ್ತದಾನ ವಿಚಾರದಲ್ಲಿ ಅಲೋಚನೆ ಮಾಡದೇ ಸ್ವಯಂಪ್ರೇರಿತರಾಗಿ ರಕ್ತವನ್ನು ದಾನಮಾಡಲು ಮುಂದಾಗಬೇಕು ಎಂದರು.

ಈ ವೇಳೆ ಅಕ್ಕಿ ಕುಟುಂಬದ ಅಕ್ಕಿ ನಿವೇದಿತಾ ಪ್ರಸನ್ನ, ಅಕ್ಕಿ ಸಂಪದ ರಕ್ತದಾನ ನೀಡಿದರು. ನಿವೃತ್ತ ಮುಖ್ಯಗುರು ರೊಟ್ಟಿ ಕೊಟ್ರಪ್ಪ, ಹಿಂದೂ ಮಹಾಗಣಪತಿ ಸಮಿತಿಯ ಸಂಚಾಲಕ ನಾಗರಾಜ ಚಿಂತ್ರಪಳ್ಳಿ, ಜಯರಾಮ ನಾಣಿಕೇರಿ, ಪ್ರಮುಖರಾದ ಸಂತೋಷ ಪೂಜಾರ್, ಟಿ.ಎಚ್.ಎಂ.ನಾಗರಾಜ, ಸಂಪತ್ ಮೂರ್ತಿ, ಕೊಟ್ರೇಶ್, ಗಣೇಶ್ , ಚಿಂತ್ರಪಳ್ಳಿ ರವಿಕುಮಾರ್, ಯು.ವೀರೇಂದ್ರ, ಪವನ, ವಿನಾಯಕ, ಸ್ವಾಮಿ ವಿವೇಕಾನಂದ ರಕ್ತಭಂಡಾರದ ಮಹೇಂದ್ರ, ವಿರೂಪಾಕ್ಷಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಪ್ರಮೋದಿನಿ, ಸಮುದಾಯ ಅರೋಗ್ಯಅಧಿಕಾರಿಗಳಾದ ಪೂಜಾ, ರೇಖಾ, ಕ್ಷೇತ್ರ ಅರೋಗ್ಯ ಶಿಕ್ಷಣಅಧಿಕಾರಿ ಯಮುನಾ, ಅಶಾ ಕಾರ್ಯಕರ್ತೆರಾದ ಎಸ್.ಮಂಜುಳಾ, ವೆಂಕಟಶಿವಮ್ಮ ಇತರರಿದ್ದರು.