ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.
ಪಟ್ಟಣದಲ್ಲಿ ಜ್ಯೋತಿ ವೃಂದ ಆಯೋಜಿಸುತ್ತಿರುವ 47 ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿ ಎರಡು ದಿನಗಳ ಕಾಲ ಅಂತರರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ವೃಂದದ ಸಂದೀಪ್ ಶಿವಮೊಗ್ಗ ತಿಳಿಸಿದರು.

ಪಟ್ಟಣದ ಅಶ್ವಿನಿ ಆಸ್ಪತ್ರೆ ಮುಂಭಾಗದ ಯು.ಕೆ.ಕೊಟ್ರಪ್ಪಬಸಪ್ಪನವರ ಖಾಲಿ ನಿವೇಶನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜ್ಯೋತಿ ವೃಂದದ ವತಿಯಿಂದ 47 ನೇ ವರ್ಷದ ಗಣೇಶೋತ್ಸವವನ್ನು ಈ ಬಾರಿ ಸಂಭ್ರಮದಿಂದ ಆಯೋಜಿಸಲಾಗಿದೆ. ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆ ಸಹಯೋಗದೊಂದಿಗೆ. ಪ್ರತಿ ವರ್ಷದಂತೆ ರೋಚಕ ವಾಲಿಬಾಲ್ ಪಂದ್ಯಾವಳಿಯಲ್ಲಿ ಈ ಬಾರಿ ಅಂತರ್ ರಾಜ್ಯ ಹೊನಲು ಬೆಳಕಿನ ವಾಲಿಬಾಲ್ ಹಮ್ಮಿಕೊಳ್ಳಲಾಗಿದೆ. ಹೊರರಾಜ್ಯದಿಂದ ಪರಿಣಿತ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ತಮಿಳುನಾಡು, ಮಹಾರಾಷ್ಟ್ರದ ಮುಂಬೈ, ಗುಜರಾತ್ ಸೇರಿದಂತೆ ಕರ್ನಾಟಕದ ಮೈಸೂರು, ಬೆಂಗಳೂರು, ಕುಮುಟಾ, ಮಂಗಳೂರು ಭಾಗದಿಂದ ಆಟಗಾರರು ಆಗಮಿಸಿದ್ದಾರೆ. ರೋಚಕ ಪ್ರದರ್ಶನಗಳು ನಡೆಯಲಿವೆ. ವಾಲಿಬಾಲ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು.
ಈ ವೇಳೆ ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷರಾದ .ಪ್ರವೀಣ್ ಸಿಂಗ್, ಕಾರ್ಯದರ್ಶಿ ಎಂ.ವೆಂಕಟೇಶ್, ನಿರ್ಣಾಯಕರಾದ ಬೆಳಗಾವಿಯ ಪ್ರಕಾಶ್ ಗುಂಡಣ್ಣನವರ್, ಬಾಗಲಕೋಟೆಯ ಜಾಗಿರದಾರ್, ಗದಗ ಪವಾರ್, ಜ್ಯೋತಿ ವೃಂದದ ಗೌರವಾಧ್ಯಕ್ಷ ಹಾಲ್ದಾಳ್ ಮಲ್ಲಿಕಾರ್ಜುನ, ಅಧ್ಯಕ್ಷ ಗಂಗಾವತಿ ವಿಜಯಕುಮಾರ್, ಉಪಾಧ್ಯಕ್ಷರು ಪೋಟೋ ರಾಮಣ್ಣ, ಪ್ರಮುಖರಾದ ಸುರೇಶ್ ಚಿನ್ನಮಲ್ಲಿ, ಹೆಗ್ಡಾಳ್ ಶ್ರೀನಿವಾಸ್ ಕೆ.ಪಿ.ಮಠದ್, ಎನ್.ವಾಗೀಶ್, ಜಿಂಕೇರಿ ರಾಜಣ್ಣ, ಪಿ.ವಿ.ಪ್ರಸಾದ್, ಐ.ಎಂ.ಸದ್ಯೋಜಾತಯ್ಯ, ಹಿರೇಮಠ್ ಶಿವಯ್ಯ, ಮೇದಾರ ಯಮುನಪ್ಪ, ಮಹೇಶ್ ಅಂಬಾಡಿ, ಸಂಚಿ ಶಿವಕುಮಾರ್, ಆನಂದ್ ಪೂಜಾರ್, ಮೇದಾರ ಕೊಟ್ರೇಶ್, ಶಂಭುಲಿಂಗ, ಗುರುಬಸವರಾಜ, ಯುವರಾಜ, ಶಿವು ಇತರರಿದ್ದರು.