Sunday, July 13, 2025
spot_img
Homeತಾಲೂಕು ಸುದ್ದಿಸ್ವಯಂ ಪ್ರೇರಿತ ಸ್ವಚ್ಚತಾ ಕಾರ್ಯ, ಇಷ್ಟ ದೇವರ ಪೂಜೆಗೆ ಸಮ : ಪೊಲೀಸ್ ಮುಖ್ಯ ಪೇದೆ...

ಸ್ವಯಂ ಪ್ರೇರಿತ ಸ್ವಚ್ಚತಾ ಕಾರ್ಯ, ಇಷ್ಟ ದೇವರ ಪೂಜೆಗೆ ಸಮ : ಪೊಲೀಸ್ ಮುಖ್ಯ ಪೇದೆ ಸ್ವರೂಪ್ ಕೊಟ್ಟೂರು ಅಭಿಮತ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ :

ಸ್ವಚ್ಚತಾ ಕಾರ್ಯದಲ್ಲಿ ನಿರತರಾದವರಿಗೆ ಸಮಾಜ ನಿರ್ಲಕ್ಷ ವಹಿಸಿ ಆ ಕಾಯಕವನ್ನು ಅತ್ಯಂತ ಕೀಳಾಗಿ ಕಾಣುತ್ತಿದೆ. ಆದರೆ ವಾಸ್ತವದಲ್ಲಿ ಸ್ವಚ್ಛತೆ ಕೆಲಸ ಅತ್ಯಂತ ಶ್ರೇಷ್ಠ ಕಾಯಕ ಎಂದು ಲೇಖಕ, ಪೊಲೀಸ್ ಮುಖ್ಯ ಪೇದೆ ಸ್ವರೂಪ್ ಕೊಟ್ಟೂರು ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಹನಸಿ ಗ್ರಾಮದ ಶ್ರೀನಿರಂಜನ ಜಗದ್ಗುರು ಶಂಕರ ಸ್ವಾಮಿ ಪ್ರೌಢಶಾಲೆಯ ನೌಕರ ರೇವಣಸಿದ್ದಯ್ಯ ಇವರ ವಯೋನಿವೃತ್ತಿ ನಿಮಿತ್ತ ಏರ್ಪಡಿಸಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸುತ್ತಲಿನ ಪರಿಸರ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗುವುದು ಇಷ್ಟ ದೇವರ ಪೂಜೆಗಿಂತ ಮಿಗಿಲು. ಸ್ವಚ್ಛತೆಗೆ ನಾವು ತೆರೆದುಕೊಂಡಷ್ಟು ಬಾಹ್ಯ ಪರಿಸರ ಮಾತ್ರವಲ್ಲ ನಮ್ಮ ಅಂತರಂಗದ ಶುದ್ದಿಯೂ ಆಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಡಾ. ಬಿ.ಆರ್ ಆಂಬೇಡ್ಕರ್.. ಹೀಗೆ ದೇಶ ಕಂಡ ಅನೇಕ ಮಹನೀಯರು ನಮಗೆ ಆದರ್ಶಪ್ರಾಯರು. ಶುದ್ಧಿ ಕೆಲಸವೇ ಆದಿ ಮತ್ತು ಅಂತಿಮ. ಶುದ್ಧಿ ಕಾರ್ಯಕ್ಕೆ ನೀವು ಅರ್ಪಿಸಿಕೊಂಡರೆ ನಿಮ್ಮ ಇಚ್ಛೆ, ಸಂಕಲ್ಪಗಳು  ಸಿದ್ಧಿಸುತ್ತವೆ. ಅದು ಭವಿಷ್ಯದಲ್ಲಿ ನಿಮಗೆ ಪ್ರಸಿದ್ಧಿಯನ್ನೂ ತರುವಲ್ಲಿ ನೆರವಾಗುತ್ತದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಶಂಕರ ಸ್ವಾಮೀಜಿ ಮಾತನಾಡಿ, ಮೂರುವರೆ ದಶಕಗಳ ಕಾಲ ರೇವಣಸಿದ್ದಯ್ಯರವರು ವೃತ್ತಿ ಜೀವನದಲ್ಲಿ ಶಾಲೆ, ಮಠದ ಪ್ರತಿಯೊಂದು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಸಹನಾಮೂರ್ತಿ, ಶಿಸ್ತಿನ ಸಿಪಾಯಿ ಆಗಿದ್ದ ರೇವಣಸಿದ್ಧಯ್ಯನವರ ಕ್ರೀಯಾಶೀಲತೆ, ಕಾಯಕದಲ್ಲಿ ತೋರಿಸುತ್ತಿದ್ದ ಶ್ರದ್ಧೆ, ಗುರು ನಿಷ್ಠೆ, ಸಮರ್ಪಣಾಭಾವ. ಮತ್ತೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ. ಇವರ ಸೇವೆ ಸದಾ ಸ್ಮರಣೀಯ ಎನ್ನುತ್ತಾ ಭಾವುಕರಾದರು.

ಶಾಲೆಯ ನಿವೃತ್ತ ಶಿಕ್ಷಕರಾದ ಬಿ.ಜಿ.ಸಿದ್ದನಗೌಡ, ಯು.ಅಜ್ಜಪ್ಪ, ನಂದೆಪ್ಪರವರು ಮಾತನಾಡುತ್ತಾ, ರೇವಣಸಿದ್ದಯ್ಯ ಉತ್ತಮ ಮತ್ತು ಅನುಭವಿ ಕೆಲಸಗಾರರಾಗಿದ್ದು, ಶ್ರೀಮಠದ, ಶಾಲೆಯ ಏಳಿಗೆ ಮತ್ತು ಶುಚಿತ್ವಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಇವರ ಸೇವಾ ಮನೋಭಾವ ಶ್ಲಾಘನೀಯ ಎಂದರು.

ಈ ವೇಳೆ ಮಾಲವಿ ಮತ್ತು ಹನಸಿ ಪ್ರೌಢಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಅಡುಗೆ ಸಹಾಯಕರು ಸೇರಿದಂತೆ ಅನೇಕರು ನಿವೃತ್ತಿ ಹೊಂದಿದ ರೇವಣಸಿದ್ದಯ್ಯ ದಂಪತಿಯನ್ನು ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಗುರು ಯು. ಗೌರಮ್ಮ, ಶಿಕ್ಷಕರಾದ ತಿರುಕಪ್ಪ, ಮಹಾದೇವಪ್ಪ, ಪುರೋಹಿತ ವೀರಪ್ಪಯ್ಯ ಮಾಲವಿ, ಮುಖ್ಯಗುರು ಶಿವಪ್ರಕಾಶ್ ಇತರರಿದ್ದರು. ವಿದ್ಯಾರ್ಥಿನಿಯರಾದ ಪಲ್ಲವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರಾದ ಲೋಕೇಶ ನಾಯ್ಕ್, ಚೇತನ್ ಕಾರ್ಯಕ್ರಮ ನಿರ್ವಹಿಸಿದರು.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!