ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹಗರಿಬೊಮ್ಮನಹಳ್ಳಿ :
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಹೆಚ್ಚಿ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ಎಂ.ಬಿ.ಬಸವರಾಜ ಹೇಳಿದರು.
ಆಗಸ್ಟ್25 ರಂದು ಭಾನುವಾರ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ವಿಕಾಸಅಕಾಡೆಮಿ ವತಿಯಿಂದ ವಿಜಯನಗರ ಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಮತ್ತು ಪಿಯುಸಿ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ತಾಲೂಕು ಸಂಚಾಲಕ ನಟರಾಜ ಬಾದಮಿ ಮಾತನಾಡಿ, ಈಗಾಗಲೇ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷರರೊಂದಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಹಾಗು ಪ್ರಥಮ ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದರು.
ಸೂಚನೆ : ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳು ಏರ್ಪಡಿಸಲಾಗಿದೆ. ವಿಷಯಗಳು : ಮಾತೃಶಕ್ತಿ, ಶಿಕ್ಷಣ ಮತ್ತು ನಾವು, ಯುವಶಕ್ತಿ,ಕೃಷಿ ಆಧಾರಿತ ಗ್ರಾಮ, ಆಹಾರ ನೈರ್ಮಲ್ಯ ಆರೋಗ್ಯ, ಗ್ರಾಮ ಮತ್ತು ದೇಶದ ಉನ್ನತಿಗೆ ಸ್ವಯಂ ಉದ್ಯೋಗದ ಕೊಡುಗೆ, ಪ್ರಕೃತಿ ಮತ್ತು ನಾವು, ಗ್ರಾಮ ಮತ್ತು ದೇಶ ಸೇವೆಯಲ್ಲಿ ಸಂಘ ಮತ್ತು ಸಂಘಟನೆಗಳ ಪಾತ್ರ, ದೇಶದ ಅಖಂಡತೆಯಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪಾತ್ರ. ಈ 9 ವಿಷಯಗಳ ಮೇಲೆ ಯಾವುದಾದರು ಒಂದು ವಿಷಯಕ್ಕೆ ಪ್ರಬಂಧ ಮತ್ತು ಭಾಷಣಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಹೆಸರು ನೊಂದಾಯಿಸಲು ಈ ಕೆಳಗೆ ತಿಳಿಸಿದ ದೂರವಾಣಿಗೆ ಸಂಪರ್ಕಿಸಲು ಕೋರಲಾಗಿದೆ : 73489 98043.