ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :
ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಕ್ಕಸೊಬಟಿ ಗ್ರಾಮದಲ್ಲಿ ಬುಧವಾರ ಚೇಳು ಕಡಿದು ಯುವಕನೊಬ್ಬ ಮೃತಪಟ್ಟಿದ್ದಾನೆ.
ಕಿತ್ನೂರು ಗ್ರಾಮದ ತಳವಾರ ಬಸವರಾಜ (18) ಮೃತ ದುರ್ದೈವಿ. ಚಿಕ್ಕ ಸೊಬಟಿ ಗ್ರಾಮದ ಬಾಣದ ಶಿವಪ್ಪನವರ ದಾಳಿಂಬೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚೇಳು ಕಡಿದಿದೆ ಎನ್ನಲಾಗಿದೆ. ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.