ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :
ಹಗರಿಬೊಮ್ಮನಹಳ್ಳಿ :
ಕ್ಷೇತ್ರದ ಜನರಿಗೆ ಸರ್ಕಾರಿ ಸೇವೆಗಳು ತ್ವರಿತವಾಗಿ ನೀಡಲು ಗ್ರಾಮಸಹಾಯಕರ ಪಾತ್ರ ಮುಖ್ಯವಾಗಿದೆ ಹಾಗಾಗೀ ಅವರಿಗೆ ಮೊಬೈಲ್ ಬಳಕೆ ಅತ್ಯಗತ್ಯ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಮತ್ತುಎಸ್ಎಲ್ಆರ್ ಮೆಟಾಲಿಕ್ಸ್ ಕಂಪನಿಯಿಂದ ಏರ್ಪಡಿಸಿದ್ದ ಗ್ರಾಮಸಹಾಯಕರಿಗೆ ಮೊಬೈಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಂದಾಯವ್ಯಾಪ್ತಿಯ ಬೇರು ಮಟ್ಟದ ನೌಕರರು ಗ್ರಾಮ ಸಹಾಯಕರು. ಸರ್ಕಾರದ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಮತ್ತು ಸಾಮಾನ್ಯ ಜನರು ಸರ್ಕಾರಗಳಿಂದ ಪಡೆಯಬಹುದಾದ ಅನುಕೂಲವನ್ನುಗ್ರಾಮ ಸಹಾಯಕರು ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಮರಿಯಮ್ಮನಹಳ್ಳಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರದ 55 ಗ್ರಾಮಸಹಾಯಕರಿಗೆ 5ಜಿ ಮೊಬೈಲ್ ಗಳನ್ನು ನೀಡಲಾಗಿದೆ. ಇನ್ಮುಂದೆ ಸಹಾಯಕರು ತಮ್ಮ ವ್ಯಾಪ್ತಿಗಳಲ್ಲಿ ಜನಸಾಮಾನ್ಯರಿಗೆ ಪಿಂಚಣಿ ಸೇವೆ ಸೇರಿದಂತೆ ಸರ್ಕಾರಿ ಸೇವೆಗಳನ್ನು ವೇಗವಾಗಿ ತಲುಪಿಸಲು ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕಿದೆ. ಎಸ್ಎಲ್ಆರ್ ವತಿಯಿಂದ ಸಿಎಸ್ಆರ್ ಅನುದಾನದಲ್ಲಿ ಗ್ರಾಮಸೇವಕರಿಗೆ ಮೊಬೈಲ್ ವಿತರಿಸಲು ಕೋರಿದಾಗ ನೀಡಲು ಒಪ್ಪಿರುವುದ ಸ್ವಾಗತಾರ್ಹ. ಸಾರ್ವಜನಿಕರಿಗೆ ಸದ್ಭಳಕೆಯಾಗುವಂತಹ ಯೋಜನೆಗಳಿಗೆ ಆದ್ಯತೆ ನೀಡಿ ಸಿಎಸ್ಆರ್ ಅನುದಾನಗಳು ಉಪಯೋಗವಾಗಲಿ ಎಂದರು.
ಈ ವೇಳೆ ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪ್ರಮುಖರಾದ ನಾಣ್ಯಾಪುರ ಕೃಷ್ಣಮೂರ್ತಿ, ಉಪತಹಸೀಲ್ದಾರರಾದ ಜಿ.ಶಿವಕುಮಾರ ಗೌಡ,ಅನ್ನದಾನೇಶ್ವರ, ಕಂದಾಯ ನಿರೀಕ್ಷಕ ಷರೀಪ್, ಕಂಪನಿ ಕಾನೂನು ಸಲಹೆಗಾರ ಲಿಂಗಪ್ಪ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಯು.ಭೀಮರಾಜ್, ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಪಕ್ಕೀರಪ್ಪ, ಕಾರ್ಯದರ್ಶಿ ನವೀನ್ ಕುಮಾರ, ತಾಲೂಕು ಅಧ್ಯಕ್ಷ ಕರಿಬಸಪ್ಪ, ಕಾವೇರಿ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಬಿ.ದೊಡ್ಡಬಸಪ್ಪ,ಎಸ್ಎಲ್ಆರ್ ಕಂಪನಿ ಸಿಬ್ಬಂದಿಗಳಾದ ಕೆ.ಮಲ್ಲಿಕಾರ್ಜುನ, ಮಾರುತಿ ಘೋಷಿ ಇದ್ದರು.