ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹಗರಿಬೊಮ್ಮನಹಳ್ಳಿ ತಾಲೂಕಿನ ಉಪನಾಯಕನ ಹಳ್ಳಿ ಗ್ರಾಮದ 66/11ವಿದ್ಯುತ್ ವಿತರಣಾ ಉಪ ಕೇಂದ್ರದ ಪರಿವರ್ತಕ 1 ಮತ್ತು 2 ರಲ್ಲಿ ನಿರ್ವಹಣಾ ಕೆಲಸ ಇರುವುದರಿಂದ ದಿ. 22 ರ ಗುರುವಾರದಂದು ಉಪನಾಯಕನಹಳ್ಳಿ ಉಪ ಕೇಂದ್ರದಿಂದ ಹಾದು ಹೋಗುವ 11ಕೆವಿ ಮಾರ್ಗಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5-30 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಶಾಖಾಧಿಕಾರಿ ಪ್ರೇಮ್ ಕುಮಾರ್ ಹಾಗೂ ಪಟ್ಟಣದ ಜೆಸ್ಕಾಂ ಎಇಇ ಕೆ.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪನಾಯಕನಹಳ್ಳಿ, ಅಂಕಸಮುದ್ರ, ಮರಬ್ಬಿ ಹಾಳ್, ಮರಬ್ಬಿಹಾಳ್ ತಾಂಡ, ಕೆಂಚಟನಹಳ್ಳಿ, ಕೆಂಚಟನಹಳ್ಳಿ ತಾಂಡ, ವರದಾಪುರ, ನಕ್ರಾಳ್ ತಾಂಡ, ಎನ್ ಡಿ.ಕೆರೆ, ಪಿಂಜಾರ್ ಹೆಗ್ಡಾಳ್, ಲಡಕನ ಬಾವಿ, ಗುಳೇದಾಳು, ಹಂಪಾಪಟ್ಟಣ, ಹೆಚ್. ಓಬಳಾಪುರ, ಕೇಶವ ರಾಯನ ಬಂಡಿ, ಹಲಗಾಪುರ, ರಾರಳ್ ತಾಂಡಾ, ಕಟ್ಟೆ ಹೊಲ ತಾಂಡ, ಮಗೆ ಮಾವಿನಹಳ್ಳಿ, ವ್ಯಾಸಪುರ ತಾಂಡ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಪಂಪ್ ಸೆಟ್ ಫೀಡರ್ ನ 2 ನೇ ಬ್ಯಾಚ್ ವಿದ್ಯುತ್ ಸರಬರಾಜು ಮಾಡುವ ವೇಳೆ ನಿರ್ವಹಣಾ ಕೆಲಸ ಮುಗಿದ ನಂತರ ಚಾಲನೆ ಮಾಡಲಾಗುವುದು ಎಲ್ಲಾ ವರ್ಗದ ಗ್ರಾಹಕರು ಸಹಕರಿಸುವಂತೆ ಎಇಇ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.