ಮೊಬೈಲ್ ಕಳ್ಳತನ : ಪತ್ತೆ ಹಚ್ಚಿ ಕಳಕೊಂಡವರಿಗೆ ಹಸ್ತಾಂತರಿಸಿದ ಹೂವಿನ ಹಡಗಲಿ ಪೊಲೀಸರು.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :
ಹೂವಿನ ಹಡಗಲಿ : ಕೆಲವು ದಿನಗಳ ಹಿಂದೆ ನಾನಾ ಕಡೆ ಸಾರ್ವಜನಿಕ ರು ಕಳೆದುಕೊಂಡಿದ್ದ ಲಕ್ಷಾಂತರ ರೂ ಮೌಲ್ಯದ 24 ಮೊಬೈಲ್ ಗಳನ್ನು ಪೋಲೀಸರು ಪತ್ತೆ ಹಚ್ಚಿ ಸಂಬಂಧಿಸಿದವರಿಗೆ ಹಸ್ತಾಂತರಿಸಲಾಯಿತು.
ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ಇತ್ತೀಚೆಗೆ ಮೊಬೈಲ್, ಎ.ಟಿ.ಎಂ.ಕಾರ್ಡ್ ಸೇರಿದಂತೆ ಇತರೆ ಕಳ್ಳತನಗಳ ಬಗ್ಗೆ ಸಾರ್ವಜನಿಕರು ಜಾಗೃತವಾಗಿರಬೇಕು. ಸಾರ್ವಜನಿಕರು ತಮ್ಮ ವಸ್ತುಗಳ ಬಗ್ಗೆ ತಮಗರಿವಿಲ್ಲದಂತೆಯೇ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಿರುವುದನ್ನು ಕಳ್ಳರು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಇದರಿಂದ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಸಿಪಿಐ ದೀಪಕ್ ಬೂಸರೆಡ್ಡಿ ಮಾತನಾಡಿ, ಅಂತರ್ಜಾಲ ತಾಣಗಳಲ್ಲಿ ನಿತ್ಯವೂ ಅಪರಾಧಗಳು ನಡೆಯುತ್ತಲೇ ಇವೆ. ಆದ್ದರಿಂದ ಆಧಾರಕಾರ್ಡ ಸಂಖ್ಯೆ, ಒಟಿಪಿ ಸಂಖ್ಯೆಯ ಸಂದೇಶಗಳಿಗೆ ಮರುಉತ್ತರ ನೀಡಬಾರದೆಂದು ಹೇಳಿದರು.
ಈ ವೇಳೆ ಪಿಎಸ್ಐ ವಿಜಯಕೃಷ್ಣ, ಎಎಸ್ಐ ರಾಜೇಂದ್ರ ನಾಯ್ಕ, ಮುಖ್ಯ ಪೇದೆ ಮಲ್ಲಪ್ಪ ಇತರರಿದ್ದರು.