ಹಿಂದೂಸ್ಥಾನ ಮರೆತ ಭೌತವಿಜ್ಞಾನದ ಅನರ್ಘ್ಯ ರತ್ನ ಯಾರು ಗೊತ್ತೇ? ಈ ಲೇಖನ ಓದಿ
ಅವಿನಾಶ್ ಜಾಧವ್
ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ನಾವು ಭಾರತೀಯರೇ ಹಾಗೆ, ಎಷ್ಟು ಬೇಗ ಇತಿಹಾಸವನ್ನು ಸೃಷ್ಠಿ ಮಾಡುತ್ತೇವೇಯೋ ಅಷ್ಟೇ ಬೇಗ ಇತಿಹಾಸದ ಪುಟಗಳನ್ನು ಮರೆಯುತ್ತೇವೆ. ನಾವುಗಳು ಕ್ರೀಡೆ ಮತ್ತು ಮನೋರಂಜನೆಗೆ ನೀಡಿದಷ್ಡು ಮಹತ್ವವವನ್ನು ವೈಜ್ಙಾನಿಕ ಕ್ಷೇತ್ರ ಅಂತಾ ಬಂದಾಗ ಮರೆತು ಬಿಡ್ತೀವಿ. ಹಾಗಾಗಿಯೇ ನಮ್ಮ ಭಾರತದ ಇತಿಹಾಸದ ಪುಟದಲ್ಲಿ ಕೆಲವೊಂದು ಅನರ್ಘ್ಯ ರತ್ನಗಳು ಮಿಂಚಿ ಮರೆಯಾದವು ಕಾರಣ ನಾವು ಅವರನ್ನ ನೆನಪಿಸಿಕೊಳ್ಳುವುದಿರಲಿ ಅವರ ಹೆಸರನ್ನೇ ಕೇಳಿರುವುದಿಲ್ಲ.
ನಮ್ಮ ಭಾರತೀಯತೆಯನ್ನು ವೈಜ್ಙಾನಿಕ ತಳಹದಿಯ ಮೇಲೆ ಜಗದಗ¯ಕ್ಕೆ ಸಾರಿದ ಮೇರು ವ್ಯಕ್ತಿತ್ವ ಮತ್ತು 19ನೇ ಶತಮಾನದಲ್ಲಿ ಯುರೋಪಿನ್ ಭೌತ ವಿಜ್ಞಾನಿಗಳು ಬೆರಗಾಗಿ ಭಾರತದ ಕಡೆ ಒಂದು ಸಲ ಗಮನಹರಿಸುವಂತೆ ತನ್ನ ಪ್ರತಿಭೆಯನ್ನು ತೋರ್ಪಡಿಸಿದ ಭಾರತೀಯ ಇತಿಹಾಸ ಮರೆತÀ ದೈತ್ಯ ಶ್ರೀ. ಸತ್ಯಂದ್ರನಾಥ ಬೋಸ್. ಮ್ಯಾಥಾಮಟಿಕಲ್, ಫಿಸಿಕ್ಸ್ ಅಲ್ಲಿ ತನ್ನದೆ ಆದÀ ಕೊಡುಗೆ ನೀಡಿದ ಸತ್ಯಂದ್ರನಾಥ ಬೋಸ್ ಅವರು 1894 ರ ಜನವರಿ 01 ರಂದು, ಇಂದಿನ ಪಶ್ಚಿಮ ಬಂಗಾಲದ ನಾದಿಯಾ ಜಲ್ಲೆಯ ಬಾರಾ ಜಗುಲೀಯಾ ಎಂಬ ಹಳ್ಳಿಯಲ್ಲಿ ಜನಿಸಿದರು ಇವರ ತಂದೆ ತಾಯಿಗೆ 7 ಜನ ಮಕ್ಕಳಲ್ಲಿ ಇವರೇ ಹಿರಿಯರು ಮತ್ತು ಇವರ ನಂತರ 6 ಜನ ಸಹೋದರಿಯರು. ಬೋಸ್ ಅವರು ತನ್ನ ಬಾಲ್ಯ ಶಿಕ್ಷಣವನ್ನು ತಮ್ಮ 5ನೇ ವಯಸ್ಸಿನಲ್ಲಿ ತಮ್ಮ ಸ್ವಗ್ರಾಮದಲ್ಲಿ ಪ್ರಾರಂಭಿಸಿ, ನಂತರ ಗೋಬಾಗನ ಎಂಬ ನಗರದಲ್ಲಿರುವ ಹಿಂದೂ ಶಾಲೆಯಲ್ಲಿ ತಮ್ಮ ಮೆಟ್ರಿಕ್ ಶಿಕ್ಷಣವನ್ನು 1909ರಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರು, ನಂತರದಲ್ಲಿ ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ವಿಜ್ಞಾನದ ಪದವಿಯನ್ನು ಪ್ರಾರಂಭಿಸಿದರು ಮತ್ತು ಮತ್ತೊಂದು ವಿಶೇಷ ಸಂಗತಿ ಏನೆಂದರೇ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬೋಸ್ ಅವರು ಜಗದೀಶ ಚಂದ್ರ ಬೋಸ್, ಶಾರದ ಪ್ರಸನ್ನದಾಸ್, ಮತ್ತಯ ಪ್ರಫುಲ್ಲ ಚಂದ್ರರಾಯ್ ಅವರನ್ನು ತಮ್ಮ ಗುರುಗಳನ್ನಾಗಿ ಪಡೆದಿದ್ದರು.
ಸತ್ಯಂದ್ರನಾಥ ಬೋಸ್ ಅವರು 1913 ರಲ್ಲಿ ಬಿ.ಎಸ್ಸಿ ಪದವಿ ಮತ್ತು 1915ರಲ್ಲಿ ಎಂ.ಎಸ್ಸಿ ಪದವಿಯನ್ನು ಮ್ಯಾಥಮಟಿಕಲ್ ಫಿಸಿಕ್ಸ ವಿಷಯದಲ್ಲಿ ಪದೆದಿರುವುದು ವಿಶೇಷ ಮತ್ತು ಎಸ್.ಎನ್.ಬೋಸ್ ಅವರು ತಮ್ಮ ಎಂ.ಎಸ್ಸಿ ಪದವಿಯಲ್ಲಿ ಗಳಿಸಿದ ಅಂಕಗಳು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಇಂದಿನವರೆಗೂ ಒಂದು ಹೊಸ ಮೈಲಿಗಲ್ಲು ಅನಂತರದಲ್ಲಿ 1916ರಲ್ಲಿ ಕಲ್ಕತ್ತ ವಿ.ವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ‘ಸಾಪೇಕ್ಷ ಸಿದ್ಧಾಂತ’ (Theory of Relativity) ಎಂಬ ವಿಷಯದ ಮೇಲೆ ತಮ್ಮ ಸಂಶೋಧನೆಯನ್ನು ಪ್ರಾರಂಭಿಸುತ್ತಾರೆ ಸತ್ಯಂದ್ರನಾಥ ಬೋಸ್ ಅವರ ಸಂಶೋಧನೆಯ ವಿಷಯ ಜಾಗತಿಕ ಭೌತವಿಜ್ಞಾನದ ಇತಿಹಾಸದಲ್ಲಿ ಒಂದು ಹೊಸ ಹುರುಪಿನ ಅಧ್ಯಾಯ ಮತ್ತು ಕ್ವಾಂಟA ಸಿದ್ಧಾಂತದಲ್ಲಿ ಒಂದು ಹೊಸ ಮೈಲಿಗಲ್ಲು. ಅಲ್ಲಿಯವರೆಗೆ ಜಾಗತಿಕ ಭೌತವಿಜ್ಞಾನದಲ್ಲಿ ಮೂಲೆ ಸೇರಬೇಕಿದ್ದ ಕೆಲ ಸಿದ್ಧಾಂತಗಳು ಬೋಸ್ ಅವರ ಸಂಶೋಧನೆಯಿAದ ಚೈತನ್ಯ ಪಡೆದುಕೊಂಡು ಇತಿಹಾಸ ರಚನೆ ಮಾಡಿದವು.
ಬೋಸ್ ಅವರು ಕೇವಲ ಭೌತ ವಿಜ್ಞಾನಕ್ಕೆ ಸೀಮಿತವಾಗಿರಲಿಲ್ಲ ಬದಲಾಗಿ ಅವರು ಬಹುಭಾಷಿ ಅವರಿಗೆ ಬೆಂಗಾಲಿ ಅಲ್ಲದೆ ಬೇರೆ ಭಾಷೆಗಳಾದ ಇಂಗ್ಲಿಷ್, ಫ್ರೆಂಚ್, ಜರ್ಮನಿ, ಮತ್ತು ಸಂಸ್ಕçತವನ್ನು ಬಲ್ಲವರಾಗಿದ್ದರು ಹಾಗೇಯೇ ಬೋಸ್ ಅವರು ರವೀಂದ್ರನಾಥ ಟ್ಯಾಗೋರ್, ಲಾರ್ಡ ಟೆನ್ನಿಸನ್ ಅವರ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಮತ್ತು ಇದರ ಹೊರತಾಗಿಯೂ ಸಂಗೀತ ವಾದ್ಯಗಳನ್ನು ನಿರರ್ಗಳವಾಗಿ ನುಡಿಸುತಿದ್ದರು ಮತ್ತು ಅಂದಿನ ಕಾಲದಲ್ಲಿಯೇ ರಾತ್ರಿ ಶಾಲೆಗಳನ್ನು ಶುರು ಮಾಡಿ ಶಿಕ್ಷಣದ ಬಗ್ಗೆಯಿರುವ ಕಾಳಜಿಯನ್ನು ತೋರಿದ್ದರು. 1918ರಲ್ಲಿ ಬೋಸ್, ಸಹಾ ಎಂಬುವರ ಜೊತೆಗೂಡಿ ಗಣಿತ ವಿಜ್ಞಾನ ಮತ್ತು ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಹಲವಾರು ಸಂಶೋಧನಾ ಪ್ರಭಂಧಗಳನ್ನು ಹೊರ ತಂದಿದ್ದು ಒಂದು ಇತಿಹಾಸವೆ ಸರಿ.
ಗೆಳೆಯರೇ ನಾವು ಹೆಮ್ಮೆಯಿಂದ ಮತ್ತು ಗರ್ವದಿಂದ ತಲೆಯೆತ್ತಿ ಹೇಳಬೇಕಾದ ಸನ್ನಿವೇಶ. ಏಕೆಂದರೆ ಭಾರತೀಯರ ತಾಕತ್ತೆ ಅದು 1924 ರಲ್ಲಿ ಆವಿಭಜಿತ ಭಾರತದ ಅಂದಿನ ಢಾಕಾ ವಿ.ವಿಯ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದ ಸತ್ಯಂದ್ರನಾಥ ಬೋಸ್ ಅವರು ಭೌತ ವಿಜ್ಞಾನದ “ಪ್ಲಾಂಕ್ ಕ್ವಾಂಟಂ ರೇಡಿಯಷನ್” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ರಚಿಸಿ ಅದನ್ನು ಯುರೋಪಿನ್ ನಿಯತಕಾಲಿಕೆಗೆ ಕಳುಹಿಸಲಾಯಿತು ಆದರೆ ಅಂದಿನ ಕಾಲದಲ್ಲಿ ಭಾರತದಿಂದ ಯುರೋಪಿಯನ್ನರು ಇಂತಹ ಕ್ಲಿಷ್ಟಕರವಾದ ಸಂಶೋಧನಾ ಪ್ರಬಂಧವನ್ನು ಅವರು ಊಹಿಸಿರಲಿಲ್ಲ ಆದ ಕಾರಣಕ್ಕಾಗಿ ಯುರೋಪಿಯನ್ ವಿಜ್ಞಾನಿಗಳು ಸಂಶೋಧನಾ ಪ್ರಬಂಧವನ್ನು ತಿರಸ್ಕರಿಸಿದರು. ಹಾಗಂತ ಬೋಸ್ ಸುಮ್ಮನಿರಲಿಲ್ಲ ತಮ್ಮ ಪ್ರಬಂಧವನ್ನು ಅಲ್ಬರ್ಟ ಐನಸ್ಟೀನ್ ಅವರಿಗೆ ಕಳುಹಿಸಲಾಯಿತು. ನಂತರದಲ್ಲಿ ನಡೆದದ್ದು ಇತಿಹಾಸ ಐನಸ್ಟೀನ್ ಅವರು ಬೋಸ್ ಕುರಿತು ಒಂದು ಪತ್ರವನ್ನು ರವಾನೆ ಮಾಡುತ್ತಾರೆ ಆ ಪತ್ರದ ಸಾರಾಂಶದಲ್ಲಿ ಬೊಸ್ ಅವರ ಪ್ರಬಂಧವನ್ನು ಕುರಿತು ಹೇಳುತ್ತಾರೆ “ನಿಮ್ಮ ಪ್ರಬಂಧವನ್ನು ನಾನು ಇಂಗ್ಲೀಷ್ ನಿಂದ ಲ್ಯಾಟಿನ್‌ಗೆ ಭಾಷಾಂತರಿಸುವಾಗ ನಿಮ್ಮ ಪ್ರಬಂಧದ ಕೆಲ ಅತ್ಯಮೂಲ್ಯವಾದ ವಿಷಯಗಳ ಸತ್ವ ಕಳೆದುಕೊಳ್ಳುವ ಭಯ ನನಗಿದೆ ನಿಮ್ಮ ಕ್ವಾಂಟಂ ಸಿದ್ದಾಂತದ ಪ್ರಬಂಧ ಭೌತವಿಜ್ಞಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲೆ ಸರಿ”. ಇದರ ಫಲವಾಗಿ ಅಂದಿನ ಕಾಲಘಟ್ಟದಲ್ಲಿ ಯಾರಾದರೂ ಒಬ್ಬ ಭಾರತೀಯ ಯುರೋಪಿಯನ್ನರಿಗೆ ಸರಿಸಾಟಿಯಾಗಿದ್ದು ಅಂದರೆ ಬೋಸ್ ಒಬ್ಬರೆ ಇದರ ಫಲವಾಗಿ ಬೋಸ್ ಅವರು ಸತತ 2 ವರ್ಷಗಳ ಕಾಲ ಐನಸ್ಟೀನ್, ಡೀ ಬ್ರೋಗ್ಲಿ, ಮತ್ತು ಮೇರಿ ಕ್ಯೂರಿ ಒಡಗೂಡಿ ಯುರೋಪಿಯನ್ ಎಕ್ಸ್ ರೇ ಲ್ಯಾಬೋರೆಟರಿಯಲ್ಲಿ ಸಂಶೋಧನೆಯನ್ನು ಮುಂದುವರೆಸಿದರು. ಇದರ ಫಲವಾಗಿ ಪಾಶ್ಚಾತ್ಯ ಭೌತ ವಿಜ್ಞಾನಿಗಳ ಸಾಲಿನಲ್ಲಿ ಬೋಸ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಬೋಸ್ ಪ್ರಬಂಧದಿಂದ ಕ್ವಾಂಟಂ ಮೆಕ್ಯಾನಿಕ್ ಕ್ಷೇತ್ರದಲ್ಲಿ ಮಾಕ್ಸವೇಲ್, ಹೈಸನ್ ಬರ್ಗ, ಮತ್ತು ಐನಸ್ಟೀನ್ ಅವರಂತಹ ದೈತ್ಯ ವಿಜ್ಞಾನಿಗಳು ಸಂಶೊಧನೆಯಲ್ಲಿ ಹೊಸ ಹಾದಿಯನ್ನುಕಂಡುಕೊಂಡರು ಅಂತ ವಿವರಿಸಿದರೆ ತಪ್ಪಗಲಾರದು.
ಪ್ರಿಯ ಓದುಗರೇ, ಎಂತಹ ವಿಪರ್ಯಾಸ ನೋಡಿ, ಜನವರಿ 01 ಹೊಸ ವರ್ಷದ ಗದ್ದಲದಲ್ಲಿ ಬೋಸ್‌ರವರನ್ನು ಮರೆತೆಬಿಟ್ಟಿದ್ದೇವೆ. ಇತಿಹಾಸ ಕೂಡ ಬೋಸ್ ಅವರನ್ನ ಮೂಲೆಗುಂಪು ಮಾಡಿಬಿಡ್ತು. ಭಾರತಾಂಬೆಯ ಒಡಲಲ್ಲಿ ಬೋಸ್ ಅಂತಹ ವ್ಯಕ್ತಿ ಮಿಂಚಿ ಮರೆಯಾದ ಅದನ್ನ ನಾವು ಗಮನಿಸಲೇ ಇಲ್ಲ. ಇನ್ನಾದರೂ ಬೋಸ್ ಅವರನ್ನ ನೆನಪಿಸಿಕೊಳ್ಳೊಣ. ಸತ್ಯಂದ್ರನಾಥ ಬೋಸ್ ಅವರಲ್ಲಿ ಕ್ಷಮೆ ಕೋರುತ್ತಾ ಅವರಿಗೆ ತ್ಯಾಗಭೂಮಿ ಬಳಗದಿಂದ ಗೌರವಯುತ ಸಲಾಂ.
ಅವಿನಾಶ್ ಜಾಧವ್
ಉಪನ್ಯಾಸಕರು, ಬರಹಗಾರರು,
ಹಗರಿಬೊಮ್ಮನಹಳ್ಳಿ.