ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ಹಗರಿಬೊಮ್ಮನಹಳ್ಳಿ :
ಕೊಲ್ಕತ್ತಾ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ವೈದ್ಯ ಡಾ.ಎ.ಎಂ.ಎ.ಕರಿಬಸಯ್ಯ ಮಾತನಾಡಿ, ಜೀವ ಉಳಿಸುವ ವೈದ್ಯರನ್ನು ಅಮಾನುಷವಾಗಿ ಜೀವ ತೆಗೆಯುವ ಕ್ರೂರಿತನ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತ ಪ್ರಕರಣಗಳಾಗಿವೆ. ವೈದ್ಯರಿಗೆ ಸೂಕ್ತ ರಕ್ಷಣೆ ಅಗತ್ಯವಿದೆ. ಕೊಲ್ಕತ್ತಾ ವೈದ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಆರೋಪಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಿ ಮೃತ ವೈದ್ಯೆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಐಎಂಎ ಕಚೇರಿಯಿಂದ ಬಸವೇಶ್ವರ ವೃತ್ತ ಮಾರ್ಗದ ಮುಖ್ಯ ರಸ್ತೆಯಲ್ಲಿ ಭಿತ್ತಿ ಚಿತ್ರಗಳನ್ನಿಡಿದು ಆರೋಪಿಗಳ ವಿರುದ್ಧ ಘೋಷಣೆ ಕುಗೂತ್ತಾ ಮುಷ್ಕರ ನಡೆಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ಡಾ.ಎಸ್.ಆರ್.ಮನೋಜ್, ಕಾರ್ಯದರ್ಶಿ ಡಾ.ವಿಶ್ವನಾಥ ಗವಿಯಪ್ಪ, ಹಿರಿಯ ವೈದ್ಯರಾದ ಡಾ.ಬಸವರಾಜ ರಡ್ಡಿ, ಡಾ.ಪಟ್ಟೆದ್ ಸಿದ್ದಮಲ್ಲಪ್ಪ, ಡಾ.ಬಂಡ್ರಿ ವಿಶ್ವನಾಥ್, ಡಾ.ವಿನಯ್ ಸಿಂಹ, ಡಾ.ಸತ್ಯನಾರಾಯಣ, ಡಾ.ಬಸವರೆಡ್ಡಿ, ಡಾ. ಮಂಜುನಾಥ್ ಸಂಕಾಳ್, ಡಾ.ಬಿ.ಎಂ.ಡಿ.ಬಸವರಾಜ, ಡಾ.ಸಿದ್ದಾರ್ಥ, ಡಾ.ಎ.ಎಂ.ಎ.ಸುರೇಶ್, ಡಾ.ಅಜ್ಜಯ್ಯ, ಡಾ.ಬೆಲ್ಲದ್, ಡಾ.ವಿನಯ್ ಸೇರಿದಂತೆ ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.