ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹಗರಿಬೊಮ್ಮನಹಳ್ಳಿ :
ಸಿಎಂ ಸಿದ್ದರಾಮಯ್ಯನವರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಳಿಕ ಬ್ಲಾಕ್ ಸಮಿತಿ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ರಾಜ್ಯದಲ್ಲಿ 136 ಶಾಸಕರ ಬಹುಮತವಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರದಿಂದ ಕೆಲವು ಸಾಮಾಜಿಕ ಕಾರ್ಯಕರ್ತರ ದೂರಿನ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಣತಿಯಂತೆ ಅನುಮತಿ ನೀಡಿರುವುದು ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿದೆ. ಇಂತಹ ನಿರ್ಧಾರ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ಆರೋಪಿಸಿದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಶೋಷಿತ ವರ್ಗದ ಜನರ ಧ್ವನಿಯಾಗಿದ್ದಾರೆ. ದೀನದಲಿತರ ಮತ್ತು ಬಡವರ ಪರ ಅನೇಕ ಯೋಜನೆಗಳನ್ನು ರೂಪಿಸಿ ನಾಡಿನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ವಿರೋಧ ಪಕ್ಷದವರು ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸದೇ ಒಳಸಂಚು ರೂಪಿಸಿ ಸುಳ್ಳು ಅಪ ಪ್ರಚಾರ ಮೂಲಕ ಆರೋಪ ದೂರುಗಳ ಮೂಲಕ ಸಿಎಂರನ್ನು ಅಧಿಕಾರದಿಂದ ಹುನ್ನಾರ ನಡೆಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕೂಡಲೇ ಪ್ರಾಸಿಕ್ಯೂಷನ್ ಹಿಂಪಡೆಯಬೇಕು ಇಲ್ಲದಿದ್ದರೇ ಹಂತ ಹಂತವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪುರಸಭೆ ಸದಸ್ಯರಾದ ತೆಲಗಿ ಇಸ್ಮಾಯಿಲ್, ಪವಾಡಿ ಹನುಮಂತಪ್ಪ, ಡಿ.ಎಂ.ಅಜೀಜುಲ್ಲಾ, ವಿ.ಮರಿರಾಮಪ್ಪ, ಗಣೇಶ್ ನಾಯ್ಕ, ಬಾಳಪ್ಪ ಉಪ್ಪಾರ, ತ್ಯಾವಣಿಗಿ ಕೊಟ್ರೇಶ್, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಪತ್ರೇಶ್ ಹಿರೇಮಠ್,
ಚಿಂತ್ರಪಳ್ಳಿ ದೇವೆಂದ್ರಪ್ಪ, ಅಲ್ಲಾಭಕ್ಷಿ , ಕೆ.ಮೈಲಾರಪ್ಪ, ಚಂದ್ರಪ್ಪ, ಸೊನ್ನದ್ ಗುರುಬಸವರಾಜ,ರೋಗಾಣಿ ಪ್ರಕಾಶ್, ಅಡವಿ ಆನಂದದೇವನಹಳ್ಳಿ ಪ್ರಭು, ಬಾಗಳಿ ವೆಂಕಟೇಶ್ ಇತರರಿದ್ದರು.