ವೃಕ್ಷೋ ರಕ್ಷತಿ ರಕ್ಷತಿಃ : ಒಂದು ಲಕ್ಷ ಸಸಿ ನೆಡುವ ‘ಹಸಿರೋತ್ಸವ’ ಅಭಿಯಾನಕ್ಕೆ ಶಾಸಕ ನೇಮಿರಾಜನಾಯ್ಕ ಚಾಲನೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :
ಹಗರಿಬೊಮ್ಮನಹಳ್ಳಿ
ಮನುಕುಲದ ಉಳಿವಿಗೆ ಪರಿಸರವೇ ದೈವ. ಗಿಡ ಮರಗಳನ್ನು ರಕ್ಷಿಸಿದರೇ ನಮ್ಮನ್ನು ರಕ್ಷಿಸಲಿವೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ಗಂಗಾವತಿ ಭೀಮಪ್ಪನವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 78ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ರೈತರ, ಯೋಧರ ಸ್ಮರಣೆಗಾಗಿ ವಿಧಾನಸಭಾ ಕ್ಷೇತ್ರದಾದ್ಯಂತ ಒಂದು ಲಕ್ಷ ಸಸಿ ನೆಡುವ ಮೂಲಕ ಹಸೀರೋತ್ಸವ ಮತ್ತು ದೀಪೋತ್ಸವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರೊನಾ ನಮಗೆ ಉತ್ತಮ ಪಾಠ ಕಲಿಸಿದೆ. ಆಕ್ಸಿಜನ್ ಸಮಸ್ಯೆಯಿಂದ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸಿವೆ. ಸದ್ಯಕ್ಕೆ ಕೇರಳದಲ್ಲಿನ ಪ್ರಕೃತಿ ವಿಕೋಪಕ್ಕೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಪರಿಸರ ಸಂರಕ್ಷಣೆ ಮಾಡಬೇಕಾಗಿದ್ದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಒಂದು ಲಕ್ಷ ಸಸಿ ನೆಡುವ ಹಸಿರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ದೇಶ ರಕ್ಷಣೆಗೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ಸೈನಿಕನಿಗೆ ಗೌರವ ಸಮರ್ಪಿಸಲು ಮನೆಗಳದಲ್ಲಿ ದೀಪ ಹಚ್ಚುವ ಮೂಲಕ ಗೌರವಿಸೋಣ ಎಂದರು.
ತಹಸೀಲ್ದಾರ ಕವಿತಾ ಮಾತನಾಡಿ ಪ್ರಕೃತಿ ಸಂರಕ್ಷಣೆಗೆ ಆದ್ಯತೆ ನೋಡಬೇಕಿದೆ. ಶಾಸಕರ ದೂರದೃಷ್ಟಿ ಚಿಂತನೆಯಿಂದ ಹಸಿರೋತ್ಸವ ಕಾರ್ಯಕ್ರಮ ಶ್ಲಾಘನೀಯ. ಒಂದು ಲಕ್ಷ ಸಸಿ ನೆಡುವ ಕಾರ್ಯ ಯಶಸ್ವಿಯಾಗಬೇಕಿದೆ ಎಂದರು ವೇಳೆ
ಈ ವೇಳೆ ತಾಪಂ ಇಒ ಡಾ.ಜಿ.ಪರಮೇಶ್ವರ, ಜೆಡಿಎಸ್ ಅಧ್ಯಕ್ಷರಾದ ವೈ.ಮಲ್ಲಿಕಾರ್ಜುನ, ಪ್ರಮುಖರಾದ ನಾಣ್ಯಾಪುರ ಕೃಷ್ಣಮೂರ್ತಿ, ಹನಸಿ ಸಿದ್ದೇಶ್, ಡಿಶ್ ಪಾಂಡುರಂಗ ನಾಯ್ಕ, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಬ್ಯಾಟಿ ನಾಗರಾಜ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ರಮೇಶ್, ವಲಯ ಅರಣ್ಯ ಅಧಿಕಾರಿ ಕೆ. ನಾಗರಾಜ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಕರಿಬಸಪ್ಪ, ಮಂಜುನಾಥ ನಾಯ್ಕ್, ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ.ಕೆ.ವೆಂಕಟೇಶ್, ಶಾಸಕರ ಆಪ್ತ ಸಹಾಯಕ ಬಿ.ದೊಡ್ಡಬಸಪ್ಪ ರೆಡ್ಡಿ, ಜೆಸ್ಕಾಂ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.