ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹರಪನಹಳ್ಳಿ : ಅಹಿಂಸಾತ್ಮಕ ಹೋರಾಟಗಳು, ಚಳುವಳಿಗಳು, ಸತ್ಯಾಗ್ರಹ ಸೇರಿ ತ್ಯಾಗ ಬಲಿದಾನಗಳಿಂದ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ಮಾತನಾಡಿದರು, ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಪಡೆದಿದ್ದೇವೆ. ಯುವಕರು ಸಧೃಡ ದೇಶ ನಿರ್ಮಾಣಕ್ಕಾಗಿ ಹಿಗ್ಗದೇ ಕುಗ್ಗದೇ ಮುನ್ನಡೆಯಬೇಕು. ಸ್ವಾತಂತ್ರ್ಯ ದಿನದ ರಜೆ ದಿನವನ್ನು ಸರ್ಕಾರಿ ನೌಕರರು ದುರ್ಬಳಕೆ ಮಾಡಿಕೊಳ್ಳದೇ ಅರ್ಥಪೂರ್ಣವಾಗಿ ಆಚರಿಸಿ. ಜಗತ್ತಿನಲ್ಲಿ ಎಲ್ಲಾರಿಗೂ ಜಾತಿ, ಲಿಂಗಭೇಧವಿಲ್ಲದೇ ಸಮಾನತೆ ಕಲ್ಪಿಸಿರುವುದು ಭಾರತದಲ್ಲಿ ಮಾತ್ರ. ಪೋಷಕರು ಮಕ್ಕಳನ್ನು ಸೇನೆಗೆ ಸೇರಿಸುವ ಮೂಲಕ ದೇಶಪ್ರೇಮ ಮೆರೆಯುವಂತೆ ಕರೆ ನೀಡಿದರು.
ಈ ವೇಳೆ ಆಡಳಿತಾಧಿಕಾರಿ ಚಿದಾನಂದ ಗುರುಸ್ವಾಮಿ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರಾದ ಎಂ.ವಿ.ಅಂಜಿನಪ್ಪ, ಕೆ.ಕುಬೇರಪ್ಪ ಹಾಗೂ ಪುರಸಭೆ ಸದಸ್ಯರು ಲಾಠಿ ದಾದಾಪೀರ್, ಉದ್ಧಾರ ಗಣೇಶ್, ಗೊಂಗಡಿ ನಾಗರಾಜ, ಜಾಕೀರ್ ಹುಸೇನ್, ಭೀಮವ್ವ, ಲಕ್ಕಮ್ಮ ಉಪಸ್ಥಿತರಿದ್ದರು.