ಅಶೋಕ್ ಉಪ್ಪಾರ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್ : ಭಾರತದಲ್ಲೀಗ 78ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ರತಿ ವರ್ಷ ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರö್ಯ ಸಿಕ್ಕ ದಿನವೆಂದು ಭಾರತ ಮಾತೆಯನ್ನು ನೆನೆದು, ಕೆಲವು ಹೋರಾಟಗಾರರನ್ನು ಸ್ಮರಿಸುತ್ತಾ, ತಿರಂಗಾ ಧ್ವಜವನ್ನು ಹಾರಿಸಿ, ಎಲ್ಲಲ್ಲೂ ಭಾರತ ಮಾತಾಕೀ ಜೈ ಎಂಬ ಉದ್ಘೋಷಗಳನ್ನು ಕುಗೂತ್ತಾ, ರಾಷ್ಟçಗೀತೆ ಹಾಡುವ ಮೂಲಕ ಟಿವಿ ಮುಂದೆನೋ, ಕ್ರೀಡಾಂಗಣದಲ್ಲಿಯೋ, ಕಚೇರಿಯಲ್ಲಿಯೋ, ಮನೆಯಂಗಳದಲ್ಲಿಯೋ ಇಂಡಿಪೆಂಡೆನ್ಸ್ ಡೇ ಆಚರಿಸಿ ಕುಟುಂಬದವರ ಜತೆಗೆ, ಸ್ನೇಹಿತರೊಂದಿಗೆ ಕಾಲಕಳೆಯುವ ರಜಾದಿನವನ್ನಾಗಿ ಬಹುತೇಕರು ಕಾಲ ಕಳೆಯುವುದು ಸಾಮಾನ್ಯ.
ಭಾರತದ ಸ್ವಾತಂತ್ರ‍್ಯಪೂರ್ವ ಹೋರಾಟಗಾರರ ಕೆಲವು ಯಶಸ್ಸಿನ ಕಥೆಗಳನ್ನು ಇಂದಿನ ಯುವ ಪೀಳಿಗೆ ಅರಿಯಬೇಕಿದೆ.
• ಮಹಾತ್ಮ ಗಾಂಧಿ (1869-1948) ಯಶಸ್ಸು : ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯನ್ನು ಮುನ್ನಡೆಸಿದರು, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ ಪ್ರತಿರೋಧವನ್ನು ಪ್ರೇರೇಪಿಸಿದರು.
• ಸುಭಾಸ್ ಚಂದ್ರ ಬೋಸ್ (1897-1945) ಯಶಸ್ಸು : ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿದರು, ಬ್ರಿಟಿಷ್ ಪಡೆಗಳ ವಿರುದ್ಧದ ಯುದ್ಧಗಳಲ್ಲಿ ಐಎನ್‌ಎ ನೇತೃತ್ವ ವಹಿಸಿದರು ಮತ್ತು ಮುಕ್ತ ಭಾರತದ ತಾತ್ಕಾಲಿಕ ಸರ್ಕಾರದ ರಚನೆಯನ್ನು ಘೋಷಿಸಿದರು.
• ಭಗತ್ ಸಿಂಗ್ (1907-1931) ಯಶಸ್ಸು: ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ನಲ್ಲಿ ಭಾಗವಹಿಸಿ, ಲಾಹೋರ್ ಪಿತೂರಿ ಪ್ರಕರಣವನ್ನು ನಡೆಸಿದರು ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹುತಾತ್ಮತೆಯ ಸಂಕೇತವಾಯಿತು.
• ರಾಣಿ ಲಕ್ಷ್ಮೀಬಾಯಿ (1828-1858) ಯಶಸ್ಸು : 1857 ರ ಭಾರತೀಯ ದಂಗೆಯನ್ನು ಮುನ್ನಡೆಸಿದರು, ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡಿದರು ಮತ್ತು ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಯಿತು.
• ಚಂದ್ರಶೇಖರ್ ಆಜಾದ್ (1906-1932) ಯಶಸ್ಸು : ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ನಲ್ಲಿ ಭಾಗವಹಿಸಿ, ಬ್ರಿಟಿಷ್ ಅಧಿಕಾರಿಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿದರು ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಶೌರ್ಯದ ಸಂಕೇತವಾಯಿತು.
• ಸರ್ದಾರ್ ವಲ್ಲಭಭಾಯಿ ಪಟೇಲ್ (1875-1950) ಯಶಸ್ಸು : ಅಸಹಕಾರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಬಾರ್ಡೋಲಿ ಸತ್ಯಾಗ್ರಹದ ನೇತೃತ್ವ ವಹಿಸಿದರು ಮತ್ತು ಸ್ವಾತಂತ್ರ‍್ಯದ ನಂತರ ಭಾರತದ ಮೊದಲ ಉಪಪ್ರಧಾನಿಯಾದರು.
• ಲಾಲಾ ಲಜಪತ್ ರಾಯ್ (1865-1928) ಯಶಸ್ಸು : ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ, ಬ್ರಿಟಿಷ್ ಆಡಳಿತದ ವಿರುದ್ಧ ಪಂಜಾಬ್ ಪ್ರತಿಭಟನೆಗಳನ್ನು ಮುನ್ನಡೆಸಿದರು ಮತ್ತು ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ಪ್ರತಿರೋಧದ ಸಂಕೇತವಾಯಿತು.
ಈ ಮಹಾನ್ ವ್ಯಕ್ತಿಗಳು, ಇತರ ಅನೇಕರ ನಡುವೆ, ಭಾರತದ ಸ್ವಾತಂತ್ರ‍್ಯ ಹೋರಾಟವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅವರ ಧೈರ್ಯ, ತ್ಯಾಗ ಮತ್ತು ದೂರದೃಷ್ಟಿಯು ಭಾರತೀಯರ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ.
“ಆಂಗ್ಲರ ದಾಸ್ಯದಲ್ಲಿದ್ದ ಭಾರತ ದೇಶದ ಜನರಿಗೆ ಸ್ವಾತಂತ್ರ್ಯ ಸುಖಾಸಮ್ಮನೆ ಸಿಕ್ಕಿದಂತೂ ಅಲ್ಲ ಬಿಡಿ. ಸಾವಿರಾರೂ ಜನರು ನೆತ್ತರು ಹರಿಸಿ, ತ್ಯಾಗ ಬಲಿದಾನಗಳ ಮೂಲಕ ಮುಂದಿನ ಭವಿಷ್ಯದ ಪೀಳಿಗೆಯವರು ದಾಸ್ಯಮುಕ್ತರಾಗಿ ಸ್ವತಂತ್ರ, ಸ್ವಚ್ಛಂದ ಬದುಕು ನಡೆಸಲೆಂಬ ಕನಸು ಕಂಡಿದ್ದರು ಅಂದಿನ ಹೋರಾಟಗಾರರು. ನಿಸ್ವಾರ್ಥ ಮನೋಭಾವದಿಂದ ದೇಶದ ಜನರ ಹಿತಕ್ಕಾಗಿ ಭವಿಷ್ಯದ ಭಾರತಕ್ಕಾಗಿ ಜೀವದ ಹಂಗು ತೊರೆದು ಲಾಠಿ ಹೊಡೆತ ತಿಂದು, ಆಂಗ್ಲ ಅಧಿಕಾರಿಗಳ ಬೂಟುನಿಂದ ಒದೆ ತಿಂದು, ಬಂದೂಕಿನ ಗುಂಡಿಗೆ ಎದೆಯೊಡ್ಡಿ, ನೇಣು ಕುಣಿಕೆಗೆ ಕೊರಳೊಡ್ಡಿ, ಬಾಂಬ್, ಫಿರಂಗಿಗಳ ಸ್ಪೋಟಕ್ಕೆ ದೇಹ ಚಿದ್ರಗೊಂಡು ಸಾವನ್ನಪ್ಪಿದ ಸಾವಿರಾರು ದೇಶ ಭಕ್ತ ಹುತಾತ್ಮರ ಆತ್ಮಗಳಿಗೆ ಚಿರಶಾಂತಿ ಮುಕ್ತಿ ಸಿಗಲೆಂದು ಬಯಸಬೇಕಾಗಿದ್ದು ಸ್ವಾತಂತ್ರೋತ್ಸವ ಆಚರಣೆಯಲ್ಲಿ ಭಾರತೀಯನ ಪ್ರಮುಖ ಕರ್ತವ್ಯವಾಗಬೇಕಿದೆ.”
ದೇಶಕ್ಕಾಗಿ ಮಡಿದ ಸಾವಿರಾರು ಹುತಾತ್ಮರಲ್ಲಿ ಇಂದು ನಾವು ಸ್ಮರಿಸುವುದು ಕೇವಲ ಮಹಾತ್ಮರೆನಿಸಿದ ಗಣ್ಯಮಾನ್ಯರನ್ನು ಮಾತ್ರ. ಸ್ವತಂತ್ರ ಹೋರಾಟದಲ್ಲಿ ಆಂಗ್ಲರನ್ನು ಎದುರಿಸಲು ಇಂತದ್ದೇ ಧರ್ಮದವರು, ಇಂತದ್ದೇ ಜಾತಿ ಮತ ಪಂಥದವರೆನ್ನದೇ ಸಂಘಟಿತ ಹೋರಾಟದಿಂದಾಗಿ ಹಿಮ್ಮೆಟಿಸುವ ನಿಟ್ಟಿನಲ್ಲಿ ಹೋರಾಟಗಳು ಯಶಸ್ವಿಗೊಂಡು ದಾಸ್ಯಮುಕ್ತರಾಗುವ ಕನಸು ನನಸುಗೊಂಡಿದೆ. ಹುತಾತ್ಮರಾದವರೆಲ್ಲರೂ ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿ ದೇಶ ಭಕ್ತರೆನಿಸಿಕೊಂಡಿದ್ದಾರೆ. ಸ್ವಾತಂತ್ರದ ಬಳಿಕ ಹುತಾತ್ಮರೆಲ್ಲ ಕಂಡಿದ್ದ ಭವ್ಯ ಭಾರತದ ಕನಸು, ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಶೀಲರಾಗಿದ್ದೇವೆಯೇ ಎಂಬುದನ್ನು ಪ್ರತಿಯೊಬ್ಬರು ಆತ್ಮಸಾಕ್ಷಿಪೂರ್ವಕವಾಗಿ ಪ್ರಶ್ನಿಸಿಕೊಳ್ಳಬೇಕಿದೆ.
ದೇಶಭಕ್ತರು ಎನಿಸಿಕೊಳ್ಳಲು ಇದೀಗ ನಮಗೇನು ಉಳಿದಿದೆ ಎಂಬುದನ್ನು ಒಂದೊಮ್ಮೆ ಯೋಚಿಸಿ. ಅಮಾನವೀಯ ಕೃತ್ಯಗಳೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮನುಷ್ಯ ಮಾನವೀಯತೆಯನ್ನು ಮರೆತು ಮೃಗೀಯ ಧೋರಣೆ ಪಾಲಿಸುತ್ತಿರುವುದು ಭವಿಷ್ಯಕ್ಕೆ ಕಂಟಕಪ್ರಾಯವಾಗಲಿದೆ. ಶಾಂತಿ, ಸಾಮಾರಸ್ಯದ ಬದುಕು ನಮ್ಮದಾದರೇ ಮಾತ್ರ ನಾವುಗಳು ಆಚರಿಸುವ ಸ್ವಾತಂತ್ರ ದಿನಾಚರಣೆ ಅರ್ಥಪೂರ್ಣವಾಗಲಿದೆ.